ಗಣಿಧಣಿ ಜನಾರ್ದನ ರೆಡ್ಡಿ ಮಗಳ ಮದುವೆ ರಾಜ್ಯದ ಜನತೆ ದೇಶದ ಗಣ್ಯತಿ ಗಣ್ಯರ ಸಮ್ಮುಖದಲ್ಲಿ  ಅದ್ದೂರಿಯಾಗಿ ಜರುಗಿದೆ. ರಾಜ್ಯದ ಮತ್ತು ದೇಶದ ಬಹುತೇಕರು, ಗಣ್ಯರಿಗೆ ಖುದ್ದು ರೆಡ್ಡಿ ಆಮಂತ್ರಣ ನೀಡಿ ಆಹ್ವಾನಿಸಿದ್ದರು. ಆದರೆ ಹಿರಿಯಣ್ಣ ಕರುಣಾಕರ ರೆಡ್ಡಿಗೆ ಮಾತ್ರ ಮದುವೆಗೆ ಆಹ್ವಾನಿಸಿಲ್ಲ.

ಬೆಂಗಳೂರು(ನ.17): ಗಣಿಧಣಿ ಜನಾರ್ದನ ರೆಡ್ಡಿ ಮಗಳ ಮದುವೆ ರಾಜ್ಯದ ಜನತೆ ದೇಶದ ಗಣ್ಯತಿ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದೆ. ರಾಜ್ಯದ ಮತ್ತು ದೇಶದ ಬಹುತೇಕರು, ಗಣ್ಯರಿಗೆ ಖುದ್ದು ರೆಡ್ಡಿ ಆಮಂತ್ರಣ ನೀಡಿ ಆಹ್ವಾನಿಸಿದ್ದರು. ಆದರೆ ಹಿರಿಯಣ್ಣ ಕರುಣಾಕರ ರೆಡ್ಡಿಗೆ ಮಾತ್ರ ಮದುವೆಗೆ ಆಹ್ವಾನಿಸಿಲ್ಲ.

ಈ ಹಿಂದೆ ಅಕ್ರಮ ಗಣಿಗಾರಿಕೆ ಪ್ರಕರಣಗಳಿಂದ ರೆಡ್ಡಿ ಬಂಧನವಾದ ನಂತರ ಅನೇಕ ಏಳು ಬೀಳುಗಳನ್ನು ಜನಾರ್ಧನ ರೆಡ್ಡಿ ಅನುಭವಿಸಿದ್ದರು. ಆದರೆ ಕರುಣಾಕರ ರೆಡ್ಡಿ ಮಾತ್ರ ಜನಾರ್ದನ ರೆಡ್ಡಿ ಕಷ್ಟಗಳ ಘೋಜಿಗೆ ಹೋಗದಿರುವುದೇ ರೆಡ್ಡಿ ಬ್ರದರ್ಸ್ ಮುನಿಸಿಗೆ ಕಾರಣವಾಯಿತು.

ಬಿಜೆಪಿ ಪಕ್ಷ ತೊರೆದು ಶ್ರೀರಾಮುಲು ಬಿಎಸ್ ಆರ್ ಪಕ್ಷ ಸ್ಥಾಪಿಸಿದಾಗಲು ಕರುಣಾಕರ ರೆಡ್ಡಿ ಇವರ ಜೊತೆ ಗುರುತಿಸಿಕೊಂಡಿದ್ದಿಲ್ಲ. ಮತ್ತು ಇನ್ನೊಬ್ಬ ಸಹೋದರ ಸೋಮಶೇಖರ ರೆಡ್ಡಿ ಕೋರ್ಟು ಕಛೇರಿ ಎಂದು ತಿರುಗುತ್ತಿದ್ದರೆ ಮನೆಯ ಹಿರಿಯ ಸಹೋದರನಾಗಿ ತಟಸ್ಥವಾಗಿದ್ದು ಜನಾರ್ದನ ರೆಡ್ಡಿ ಮನಸ್ಥಾಪಕ್ಕೆ ಕಾರಣ ಎಂದು ಆಪ್ತ ಮೂಲಗಳಲ್ಲಿ ಕೇಳಿ ಬರುತ್ತಿದೆ.