ಬೆಂಗಳೂರು: ‘ಸಿದ್ದರಾಮಯ್ಯ ಪಾಪಗಳಿಂದಾಗಿಯೇ ಅವರು ಪುತ್ರಶೋಕ ಅನುಭವಿಸುವಂತಾಯಿತು’ ಎಂಬ ಹೇಳಿಕೆ ಬಗ್ಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

ರೆಡ್ಡಿ ಪರವಾಗಿ ತಾವು ಕ್ಷಮೆಯಾಚಿಸುವುದಾಗಿ ಅವರ ಆಪ್ತ, ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ. ಇದೆಲ್ಲದರ ನಡುವೆ, ಸುದ್ದಿವಾಹಿನಿಗಳೊಂದಿಗೆ ಮಾತನಾಡಿದ ರೆಡ್ಡಿ, ಈ ಬಗ್ಗೆ ಸಿದ್ದರಾಮಯ್ಯ ಅಥವಾ ಜನರಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

ಇದೆಲ್ಲದಕ್ಕೂ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ರೆಡ್ಡಿ ಒಬ್ಬ ಕ್ರಿಮಿನಲ್‌ ವ್ಯಕ್ತಿ, ಕ್ಷಮೆಗೆ ಅರ್ಹನಲ್ಲ. ಆದರೆ, ರೆಡ್ಡಿ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲ ಎಂದು ಹೇಳಿದ್ದಾರೆ.