Asianet Suvarna News Asianet Suvarna News

ಚುನಾವಣೆ ಅಭ್ಯರ್ಥಿಗಳಿಗೆ ಹೋಟೆಲ್‌ ರೂಂ

ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಹೋಟೆಲ್ ರೂಮ್ ಗಳನ್ನು ಬುಕ್ ಮಾಡಲಾಗಿದೆ. ಜಮ್ಮು ಕಾಶ್ಮೀರ ಈ ವ್ಯವಸ್ಥೆ ಕಲ್ಪಿಸಿದೆ.

Jammu Kashmir Govt To Give Extra Pay To Poll Staff
Author
Bengaluru, First Published Sep 27, 2018, 8:27 AM IST
  • Facebook
  • Twitter
  • Whatsapp

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಅ.8ರಿಂದ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಉಗ್ರರ ದಾಳಿಯಿಂದ ತಪ್ಪಿಸುವ ನಿಟ್ಟಿನಲ್ಲಿ ಜಮ್ಮು- ಕಾಶ್ಮೀರ ಸರ್ಕಾರ ಹೋಟೆಲ್‌ ವಾಸ್ತವ್ಯ ಭಾಗ್ಯ ಕಲ್ಪಿಸಿದೆ. 

ಅಭ್ಯರ್ಥಿಗಳು ಉಳಿದುಕೊಳ್ಳಲು ಶ್ರೀನಗರದಲ್ಲಿ 300 ಹೋಟೆಲ್‌ ರೂಮು ಕಾಯ್ದಿರಿಸಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ಸೇನಾ ಪಡೆಗಳ 400 ತುಕಡಿಗಳನ್ನು ಜಮ್ಮು- ಕಾಶ್ಮೀರದೆಲ್ಲೆಡೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ಒಂದು ತಿಂಗಳ ಹೆಚ್ಚುವರಿ ವೇತನ ನೀಡಲು ಸರ್ಕಾರ ನಿರ್ಧರಿಸಿದೆ. ಸ್ಥಳೀಯ ಚುನಾವಣೆಗೆ ಸ್ಪರ್ಧಿಸದಂತೆ ಉಗ್ರರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Follow Us:
Download App:
  • android
  • ios