Asianet Suvarna News Asianet Suvarna News

PoKಯಿಂದ 50 ಕೋಟಿ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ದಂಪತಿ ಅರೆಸ್ಟ್

ಜಮ್ಮು ಕಾಶ್ಮೀರ  ಮೂಲದ ದಂಪತಿ ಪಾಕ್ ಆಕ್ರಮಿತ ಕಾಶ್ಮೀರದಿಂದ 50 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಸಾಗಿಸುತ್ತಿದ್ದಾಗ ವಿಶೇಷ ಕಾರ್ಯಪಡೆ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

Jammu Kashmir Couple Smuggle Heroin From Pok Held
Author
Bengaluru, First Published Nov 28, 2018, 12:41 PM IST

ಲೂಧಿಯಾನ: ಜಮ್ಮು ಕಾಶ್ಮೀರ ಮೂಲದ ದಂಪತಿ ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ 10 ಕೆ.ಜಿ ಹೆರಾಯಿನ್ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ. 

ಸುಮಾರು 50 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಪಂಜಾಬ್‌ನ ಲೂಧಿಯಾನಕ್ಕೆ ಪೂರೈಸಲು ಒಯ್ಯುತ್ತಿದ್ದ  ವೇಳೆ ವಿಶೇಷ ಕಾರ್ಯ ಪಡೆ ದಾಳಿ ನಡೆಸಿದ್ದು, ಮೊಹಮ್ಮದ್ ಅರ್ಬಿ ಹಾಗೂ ಜಮೀಲಾ ಬೇಗಮ್ ಅವರ ಬಳಿ ಇದ್ದ 10.25 ಕೆ.ಜಿ ಹೆರಾಯಿನ್ ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. 

ಸೋಮವಾರ ರಾತ್ರಿ ಜಮ್ಮು ಕಾಶ್ಮೀರದ ಶೆರ್ಪುರ್ ಬೈ ಪಾಸ್ ಬಳಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಿಂದ ಲೂದಿಯಾನಕ್ಕೆ ಹೆರಾಯಿನ್ ಕೊಂಡೊಯ್ಯುತ್ತಿದ್ದ ವೇಳೆ ಈ ದಂಪತಿ ಸಿಕ್ಕಿ ಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಂಡಿದ್ದು, ವಿಚಾರಣೆ  ವೇಳೆ ದಂಪತಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಪಾಕ್ ಮೂಲದ  ಅಕ್ರಮ ಮಾದಕ ವಸ್ತು ಮಾರಾಟಗಾರರು ತಮಗೆ ಹೆರಾಯಿನ್ ಪೂರೈಸುತ್ತಿದ್ದಾಗಿ ಒಪ್ಪಿ ಕೊಂಡಿದ್ದಾರೆ, ಎಂದು ಎಸ್‌ಟಿಎಫ್ ಸಹಾಯಕ ಮಹಾ ನಿರೀಕ್ಷಕ ಸಂದೀಪ್ ಶರ್ಮ ಹೇಳಿದ್ದಾರೆ. 

ಈ ದಂಪತಿ ಬೇರೆ ಬೇರೆ ರಾಜ್ಯಗಳಿಗೂ ಮಾದಕ ವಸ್ತು ಸಾಗಿಸುತ್ತಿದ್ದು, ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿಂದೆಯೂ ಮಾದಕ ವಸ್ತು ಸಾಗಾಟದ ವೇಳೆ ದಂಪತಿ ವಿರುದ್ಧ ದೂರು ದಾಖಲಾಗಿತ್ತು ಎಂದು ಎಸ್‌ಟಿಎಫ್ ಅಧಿಕಾರಿ ಹೇಳಿದ್ದಾರೆ.

Follow Us:
Download App:
  • android
  • ios