ಪಾಕಿಸ್ತಾನದ ವಸ್ತುಗಳಿಗೆ ಶೇ. 200 ಕರ ವಿಧಿಸಿದ ಮೇಲೆ ಕೇಂದ್ರ ಸರಕಾರ ಪುಲ್ವಾಮಾ ದಾಳಿಗೆ ಉತ್ತರವಾಗಿ ಮತ್ತೊಂದು ದಿಟ್ಟ ಕ್ರಮ ತೆಗೆದುಕೊಂಡಿದೆ.
ನವದೆಹಲಿ[ಫೆ.17] 5 ಜನ ಹುರಿಯತ್ ನಾಯಕರಿಗೆ ನೀಡಿದ್ದ ಭದ್ರತೆಯನ್ನು ಜಮ್ಮು ಮತ್ತು ಕಾಶ್ಮೀರ ಸರಕಾರ ಹಿಂದಕ್ಕೆ ಪಡೆದಿದೆ.
ಮಿರ್‌ವಾಯಿಜ್ ಉಮರ್ ಫಾರೂಕ್ ಸೇರಿದಂತೆ ಐವರು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ಭದ್ರತೆಯನ್ನು ಜಮ್ಮು ಮತ್ತು ಕಾಶ್ಮೀರ ಸರಕಾರ ಹಿಂತೆಗೆದುಕೊಂಡಿದೆ.
ಪುಲ್ವಾಮ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮೋದಿ ಸರ್ಕಾರದಿಂದ ‘ಆರ್ಥಿಕ’ ಸ್ಟ್ರೈಕ್!
ಅಬ್ದುಲ್ ಘನಿ ಭಟ್, ಬಿಲಾಲ್ ಲೋನ್, ಹಶೀಮ್ ಖುರೇಶಿ. ಫಜಲ್ ಹಕ್, ಶಬ್ಬೀರ್ ಶಾಗೆ ನೀಡಿದ್ದ ಭದ್ರತೆ ಹಿಂದಕ್ಕೆ ಪಡೆದುಕೊಳ್ಳಲಾಗಿದೆ.
