ನವದೆಹಲಿ: ಪುಲ್ವಾಮ ದಾಳಿ ಬೆನ್ನಲ್ಲೇ ಪಾಕಿಸ್ತಾನ ಮೇಲೆ ಆರ್ಥಿಕ ಪ್ರಹಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಪಾಕಿಸ್ತಾನದಿಂದ ಆಮದಾಗುವ ಎಲ್ಲಾ ಸರಕುಗಳಿಗೆ ತೆರಿಗೆಯನ್ನು 200 ಶೇ. ಹೆಚ್ಚಿಸಿದೆ. 

ದಾಳಿಯ ಹಿನ್ನೆಲೆಯಲ್ಲಿ, ಆಪ್ತ ರಾಷ್ಟ್ರಗಳ ಪಟ್ಟಿಯಿಂದ ಶುಕ್ರವಾರ ಭಾರತವು ಪಾಕಿಸ್ತಾನವನ್ನು ತೆಗೆದು ಬಿಸಾಡಿತ್ತು. ಈಗ ಅದರ ಬೆನ್ನಲ್ಲೇ ಮತ್ತೊಂದು ಶಾಕ್ ನೀಡಿದೆ.

 

ಪಾಕಿಸ್ತಾನದಿಂದ ಆಮದಾಗುವ ಎಲ್ಲಾ ಸರಕುಗಳಿಗೆ ತೆರಿಗೆಯನ್ನು 200 ಶೇ. ಹೆಚ್ಚಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಹಣ್ಣು, ಸಿಮೆಂಟ್, ಚರ್ಮದ ಉತ್ಪನ್ನಗಳು, ಮೆಣಸು ಮತ್ತು ಕೆಲ ರಾಸಾಯನಿಕಗಳನ್ನು ಭಾರತವು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತದೆ. ಭಾರತ ಪಾಕಿಸ್ತಾನ ನಡುವೆ ವಾರ್ಷಿಕ 488 ಮಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದ್ದು, ಈಗ ಅಷ್ಟು ಮೌಲ್ಯದ ಸರಕುಗಳ ಆಮದಿಗೆ ಬ್ರೇಕ್ ಬಿದ್ದಂತಾಗಿದೆ. 

ಕಳೆದ ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿ 44 CRPF ಯೋಧರನ್ನು ಬಲಿ ಪಡೆದಿದ್ದರು.