ಕೈಯಲ್ಲಿ ಉಂಗುರ, ತಲೆ ಮೇಲೆ ಬಂಗಾರದ ಕಿರೀಟ, ಸಿಲ್ಕ್ ಬಟ್ಟೆ ತೊಡುವ ನೀವು ಹೇಗೆ ಬಡವರು ಸ್ವಾಮಿ?

First Published 24, Mar 2018, 3:20 PM IST
Jamdar Slams Panchapeetha
Highlights

ಕೈಯಲ್ಲಿ ಪಳಪಳ ಹೊಳೆಯುವ ವಜ್ರದ ಉಂಗುರಗಳ, ತಲೆಯ ಮೇಲೆ ಭಾರದ ಬಂಗಾರದ ಕಿರೀಟ, ಕೊರಳಲ್ಲಿ ಹಗ್ಗದಂತೆ ಬಂಗಾರದ ಹಾರಗಳು, ಕೈಯಲ್ಲಿ ದೊಡ್ಡ ದೊಡ್ಡ ಕಡಗಗಳು, ಮಿಂಚುವ ಸಿಲ್ಕ್ ಬಟ್ಟೆಗಳು ಎಲ್ಲಿ‌ ಸ್ವಾಮಿ ಬಡವರು ನೀವು? ಇದೆಲ್ಲಾ‌ ಯಾರು ಕೊಟ್ಟಿದ್ದು, ಭಕ್ತರಲ್ವೇ? ಎಂದು ಪಂಚಪೀಠಗಳ ವಿರುದ್ಧ ಜಮಾದಾರ್ ವಾಗ್ದಾಳಿ ನಡೆಸಿದ್ದಾರೆ.  

ಬೆಂಗಳೂರು (ಮಾ.24): ಕೈಯಲ್ಲಿ ಪಳಪಳ ಹೊಳೆಯುವ ವಜ್ರದ ಉಂಗುರಗಳ, ತಲೆಯ ಮೇಲೆ ಭಾರದ ಬಂಗಾರದ ಕಿರೀಟ, ಕೊರಳಲ್ಲಿ ಹಗ್ಗದಂತೆ ಬಂಗಾರದ ಹಾರಗಳು, ಕೈಯಲ್ಲಿ ದೊಡ್ಡ ದೊಡ್ಡ ಕಡಗಗಳು, ಮಿಂಚುವ ಸಿಲ್ಕ್ ಬಟ್ಟೆಗಳು ಎಲ್ಲಿ‌ ಸ್ವಾಮಿ ಬಡವರು ನೀವು? ಇದೆಲ್ಲಾ‌ ಯಾರು ಕೊಟ್ಟಿದ್ದು, ಭಕ್ತರಲ್ವೇ? ಎಂದು ಪಂಚಪೀಠಗಳ ವಿರುದ್ಧ ಜಮಾದಾರ್ ವಾಗ್ದಾಳಿ ನಡೆಸಿದ್ದಾರೆ.  

ಅಡ್ಡಪಲ್ಲಕ್ಕಿ ನಡೆಸಬಾರದೆಂದರೂ ಪಲ್ಲಕ್ಕಿ ಉತ್ಸವ ನಡೆಸುತ್ತೀರಾ ಎಂದು ಜಾಮಾದಾರ್ ಕಿಡಿ ಕಾರಿದ್ದಾರೆ.  ವೀರಶೈವ ಮಹಾಸಭಾ ವೀರಶೈವ ಮಹಸಭಾ ಅಷ್ಟೇ  ನಮಗೂ ಅದಕ್ಕೂ ಸಂಬಂಧ ಇಲ್ಲ.  ನಿನ್ನೆಗೆ ನಮ್ಮ ಅವರ ಸಂಬಂಧ ಮುಗಿಯಿತು.  ಲಿಂಗಾಯತರು ನಿಮ್ಮ ಅಸ್ಮಿತೆಗಾಗಿ ಮಹಾಸಭಾದ ಪದಾಧಿಕಾರಿಗಳ ಸ್ಥಾನದಿಂದ ಹೊರಬನ್ನಿ.  ಇಲ್ಲಾ ವೀರಶೈವ ಮಹಾಸಭೆ ನಮ್ಮೊಂದಿಗೆ ಇರಬೇಕು ಅಂದ್ರೆ ನಿನ್ನೆ ಹೊರಡಿಸಿರೋ ಆರು ಅಂಶಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಜಾಮ್ದಾರ್ ಹೇಳಿದ್ದಾರೆ. 

loader