ನಾಳೆಯೇ ತಮಿಳುನಾಡು ರಾಜ್ಯದ ವಿವಿಧೆಡೆ ಜಲ್ಲಿಕಟ್ಟು ಆಯೋಜಿಸಲಾಗಿದೆ. ಮಧುರೈನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಸಿಎಂ ಓ ಪನ್ನಿರ್ ಸೆಲ್ವಂ ಚಾಲನೆ ನೀಡಲಿದ್ದಾರೆ.

ಚೆನ್ನೈ(ಜ.21): ತಮಿಳುನಾಡು ಗವರ್ನರ್ ವಿದ್ಯಾಸಾಗರ್ ರಾವ್ ಸುಗ್ರೀವಾಜ್ಞೆಯನ್ನ ಜಾರಿಗೊಳಿಸುವ ಮೂಲಕ ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುವಿನ ನಿಷೇಧವನ್ನ ತೆರವುಗೊಳಿಸಿದ್ದಾರೆ. ಸಾಂಪ್ರದಾಯಿಕ ಕ್ರೀಡೆ ಉಳಿವಿಗೆ ತಮಿಳರು ನಡೆಸಿದ ಹೋರಾಟಕ್ಕೆ ಜಯ ಸಂದಿದೆ.

ಹೀಗಾಗಿ, ನಾಳೆಯೇ ತಮಿಳುನಾಡು ರಾಜ್ಯದ ವಿವಿಧೆಡೆ ಜಲ್ಲಿಕಟ್ಟು ಆಯೋಜಿಸಲಾಗಿದೆ. ಮಧುರೈನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಸಿಎಂ ಓ ಪನ್ನಿರ್ ಸೆಲ್ವಂ ಚಾಲನೆ ನೀಡಲಿದ್ದಾರೆ.