ಜಲ್ಲಿಕಟ್ಟು ನಿಷೇಧ ವಿರೋಧಿಸಿ ತಮಿಳುನಾಡಿನಾದ್ಯಂತ ಪ್ರತಿಭಟನೆ ಇಂದೂ ಮುಂದುವರೆದಿದೆ. ಮಧುರೈ, ಚೆನ್ನೈ, ಸೇಲಂ ಮತ್ತು ಕೊಯಮತ್ತೂರಿನಲ್ಲಿ ಸಾವಿರಾರು ಜನ ಜಲ್ಲಿಕಟ್ಟು ನಿಷೇಧ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ನವದೆಹಲಿ (ಜ.18): ಜಲ್ಲಿಕಟ್ಟು ನಿಷೇಧ ವಿರೋಧಿಸಿ ತಮಿಳುನಾಡಿನಾದ್ಯಂತ ಪ್ರತಿಭಟನೆ ಇಂದೂ ಮುಂದುವರೆದಿದೆ. ಮಧುರೈ, ಚೆನ್ನೈ, ಸೇಲಂ ಮತ್ತು ಕೊಯಮತ್ತೂರಿನಲ್ಲಿ ಸಾವಿರಾರು ಜನ ಜಲ್ಲಿಕಟ್ಟು ನಿಷೇಧ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ನಿನ್ನೆಯಿಂದ ಶುರುವಾದ ಪ್ರತಿಭಟನೆ ಇಂದೂ ಮರೀನಾ ಬೀಚ್ ನಲ್ಲಿ ಮುಂದುವರೆದಿದೆ. ಸುಮಾರು 5 ಸಾವಿರ ಪ್ರತಿಭಟನಾಕಾರರು ಭಾಗಿಯಾಗಿದ್ದಾರೆ. ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ ರಾಜ್ಯ ಸರ್ಕಾರ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸುವುದಾಗಿ ಭರವಸೆ ನೀಡಿದೆ.
ರಾಜ್ಯ ಮೀನುಗಾರಿಕಾ ಸಚಿವ ಡಿ ಜಯಕುಮಾರ್ ಪ್ರತಿಭಟನಾ ಮುಖಂಡರ ಜೊತೆ ಮಾತನಾಡಿ, ಜಲ್ಲಿಕಟ್ಟು ಆಯೋಜಿಸಲು ಎಐಡಿಎಂಕೆಯ 50 ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ. ಜೊತೆಗೆ ರಾಜ್ಯ ಸರ್ಕಾರವು ರಾಷ್ಟ್ರಪತಿಯನ್ನು ಭೇಟಿಯಾಗಿ ಸುಗ್ರೀವಾಜ್ಞೆ ತರಲು ಕೋರುತ್ತದೆ ಎಂದಿದ್ದಾರೆ.
ಸದ್ಯಕ್ಕೆ 200 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೋಲಿಸರು ಬಂಧಿಸಿದ್ದಾರೆ.
