ಜಮ್ಮು ಕಾಶ್ಮೀರದಲ್ಲಿ ಸೇನಾಪಡೆಗಳಿಂದ ಹತನಾದ ಉಗ್ರ ನೂರ್ ಮೊಹಮ್ಮದ್ ತಾಂತ್ರೆ ಬಿಜೆಪಿ ಸೇರಲು ಬಯಸಿದ್ದ ಎನ್ನುವ ವಿಚಾರವೊಂದು ಬೆಳಕಿಗೆ ಬಂದಿದೆ.
ನವದೆಹಲಿ (ಡಿ.27): ಜಮ್ಮು ಕಾಶ್ಮೀರದಲ್ಲಿ ಸೇನಾಪಡೆಗಳಿಂದ ಹತನಾದ ಉಗ್ರ ನೂರ್ ಮೊಹಮ್ಮದ್ ತಾಂತ್ರೆ ಬಿಜೆಪಿ ಸೇರಲು ಬಯಸಿದ್ದ ಎನ್ನುವ ವಿಚಾರವೊಂದು ಬೆಳಕಿಗೆ ಬಂದಿದೆ.
ಈತ ಬಿಜೆಪಿ ಕಚೇರಿಗೆ ತೆರಳಿ ಅಲ್ಲಿ ಸದಸ್ಯತ್ವ ಪಡೆದುಕೊಳ್ಳಲೂ ಯತ್ನಿಸಿದ್ದನೆನ್ನಲಾಗಿದೆ. ಇನ್ನು ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿ ಮುಖಂಡರನ್ನು ಹತ್ಯೆ ಮಾಡುವ ಯೋಚನೆಯನ್ನು ಮಾಡಿದ್ದನೆನ್ನಲಾಗಿದೆ.
ಜೈಷ್ ಉಗ್ರ ಸಂಘಟನೆ ಕಾಶ್ಮೀರದಲ್ಲಿ ಮತ್ತೆ ತಲೆ ಎತ್ತುವಂತಾಗಲು ಅದರ ಹಿಂದೆ ಇದ್ದ ಮೆದುಳು ಎಂದೆ ಕರೆಯಲಾಗುತ್ತಿದ್ದ ನೂರ್ ಮೊಹಮ್ಮದ್ ತಾಂತ್ರೆಯನ್ನು ಇದೀಗ ಭದ್ರತಾ ಪಡೆಗಳು ಎನ್ಕೌಂಟರ್ ಮಾಡಿವೆ.
