100 ಕೋಟಿ ರು. ಆಸ್ತಿ, ಅಪಾರ ಆದಾಯ ಹೊಂದಿರುವ ಉದ್ದಿಮೆ ತೊರೆದು ಯುವ ಜೈನ ದಂಪತಿಯೊಂದು ಶನಿವಾರ ಜೈನ ಸನ್ಯಾಸಿಗಳಾಗಿ ದೀಕ್ಷೆ ಪಡೆಯಲಿದೆ. 35 ವರ್ಷದ ಸುಮೀತ್ ರಾಥೋರ್ ಹಾಗೂ ಅವರ ಪತ್ನಿ ಅನಾಮಿಕ ರಾಥೋರ್ ಗುಜರಾತಿನ ಸೂರತ್‌ನಲ್ಲಿರುವ ಸುಧಾಮಾರ್ಗಿ ಜೈನ ಆಚಾರ್ಯ ರಾಮಲಾಲ್ ಮಹಾರಾಜ್ ಅವರ ಸಮ್ಮುಖ ಶನಿವಾರ ಜೈನ ದೀಕ್ಷೆಯನ್ನು ಪಡೆಯಲಿದ್ದಾರೆ.
‘ಭೋಪಾಲ್(ಸೆ.23): 100 ಕೋಟಿ ರು. ಆಸ್ತಿ, ಅಪಾರ ಆದಾಯ ಹೊಂದಿರುವ ಉದ್ದಿಮೆ ತೊರೆದು ಯುವ ಜೈನ ದಂಪತಿಯೊಂದು ಶನಿವಾರ ಜೈನ ಸನ್ಯಾಸಿಗಳಾಗಿ ದೀಕ್ಷೆ ಪಡೆಯಲಿದೆ. 35 ವರ್ಷದ ಸುಮೀತ್ ರಾಥೋರ್ ಹಾಗೂ ಅವರ ಪತ್ನಿ ಅನಾಮಿಕ ರಾಥೋರ್ ಗುಜರಾತಿನ ಸೂರತ್ನಲ್ಲಿರುವ ಸುಧಾಮಾರ್ಗಿ ಜೈನ ಆಚಾರ್ಯ ರಾಮಲಾಲ್ ಮಹಾರಾಜ್ ಅವರ ಸಮ್ಮುಖ ಶನಿವಾರ ಜೈನ ದೀಕ್ಷೆಯನ್ನು ಪಡೆಯಲಿದ್ದಾರೆ.
ಈ ದಂಪತಿಗೆ 3 ವರ್ಷದ ಮಗು ಇದ್ದು, ಅದನ್ನು ತೊರೆಯಲು ನಿರ್ಧರಿಸಿದ್ದಾರೆ. ಮೊಮ್ಮಗಳ ಜವಾಬ್ದಾರಿ ಹೊರಲು ಅನಾಮಿಕ ಪೋಷಕರು ನಿರ್ಧರಿಸಿದ್ದಾರೆ. ಉದ್ಯಮಿಯಾಗಿರುವ ಸುಮೀತ್ ಲಂಡನ್ನಲ್ಲಿ ಆಮದು ಹಾಗೂ ರ್ತು ನಿರ್ವಹಣೆ ಡಿಪ್ಲೊಮಾ ಮುಗಿಸಿ ಕುಟುಂಬದ ಉದ್ದಿಮೆ ನೋಡಿಕೊಳ್ಳಲು ನೀಮುಚ್ಗೆ ಮರಳಿದ್ದರು. ಅನಾಮಿಕ ಅವರು ರಾಜಸ್ಥಾನದ ಮೋದಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿ ಹಿಂದುಸ್ತಾನ್ ಜಿಂಕ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ವಿವಾಹವಾದ ಬಳಿಕ ಕೆಲಸ ತೊರೆದಿದ್ದರು. ಈ ದಂಪತಿಗೆ ಇಭ್ಯಾ ಎಂಬ ಹೆಣ್ಣು ಮಗು ಜನಿಸಿತ್ತು. ಆ ಮಗುವಿಗೆ 8 ತಿಂಗಳು ಆಗಿದ್ದ ಸಂದ‘ರ್ದಲ್ಲಿ ದಂಪತಿಗೆ ಸನ್ಯಾಸ ಸ್ವೀಕರಿಸುವ ಮನಸ್ಸಾಗಿತ್ತು.
