ರೇಪ್‌ ಕೇಸಲ್ಲಿ ಆಸಾರಂನ ಪುತ್ರ ನಾರಾಯಣ್‌ ಸಾಯಿ ದೋಷಿ

ರೇಪ್‌ ಕೇಸಲ್ಲಿ ಆಸಾರಂನ ಪುತ್ರ ನಾರಾಯಣ್‌ ಸಾಯಿ ದೋಷಿ: 30ಕ್ಕೆ ಶಿಕ್ಷೆ ಪ್ರಕಟ

Jailed Asaram s Son Narayan Sai Convicted For Rape

ಅಹಮದಾಬಾದ್‌[ಏ.27]: ಸ್ವಯಂ ಘೋಷಿತ ದೇವಮಾನವ ಆಸಾರಾಂ ಪುತ್ರ ನಾರಾಯಣ್‌ ಸಾಯಿ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು ತೀರ್ಪು ನೀಡಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಏ.30ರಂದು ಘೋಷಿಸಲಿದೆ.

ಅಸಾರಾಂಗೆ ಮತ್ತೆ ಜೈಲೇ ಗತಿ

2013ರ ಅಕ್ಟೋಬರ್‌ನಲ್ಲಿ ಸೂರತ್‌ ಮೂಲದ ಇಬ್ಬರು ಸಹೋದರಿಯರು ಸ್ವಯಂಘೋಷಿತ ದೇವಮಾನವ ಅಸಾರಾಂ ಹಾಗೂ ಪುತ್ರ ನಾರಾಯಣ್‌ ಸಾಯಿ ವಿರುದ್ಧ ದಾಖಲಿಸಿದ ದೂರಿನ ಮೇರೆಗೆ, ಅದೇ ವರ್ಷದ ಡಿಸೆಂಬರ್‌ನಲ್ಲಿ ಹರ್ಯಾಣದ ಕುರುಕ್ಷೇತ್ರದ ಪಿಪ್ಲಿ ಎಂಬಲ್ಲಿ ನಾರಾಯಣ್‌ ಸಾಯಿನನ್ನು ಬಂಧಿಸಲಾಗಿತ್ತು.

ಅಪ್ರಾಪ್ತೆಯ ಅತ್ಯಾಚಾರ : ಸಾವಿರಾರು ಕೋಟಿ ಒಡೆಯನಿಗೆ ಸಾಯುವವರೆಗೆ ಜೈಲು

ಆಸಾರಾಂ ಈಗಾಗಲೇ ಇನ್ನೊಂದು ರೇಪ್‌ ಕೇಸಲ್ಲಿ ಜೈಲು ಸೇರಿದ್ದಾರೆ.

Latest Videos
Follow Us:
Download App:
  • android
  • ios