ಅಸಾರಾಂಗೆ ಮತ್ತೆ ಜೈಲೇ ಗತಿ

First Published 25, Apr 2018, 10:54 AM IST
Asaram convicted of raping minor girl
Highlights

ಸ್ವಯಂಘೋಷಿತ ದೇವಮಾನವ ಸಾರಾಂ ಬಾಪು ಆರೋಪಿಯಾಗಿರುವ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟಗೊಂಡಿದೆ.  ಅಸಾರಂ ಅಪರಾಧಿ ಎಂದು ಜೋಧ್’ಪುರ ವಿಶೇಷ ಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದೆ.

ಜೋಧ್‌ಪುರ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಆರೋಪಿಯಾಗಿರುವ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣದ ತೀರ್ಪು ಪ್ರಕಟಗೊಂಡಿದೆ.  ಅಸಾರಂ ಅಪರಾಧಿ ಎಂದು ಜೋಧ್’ಪುರ ವಿಶೇಷ ಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದೆ. ಸ್ವಯಂ ಘೋಷಿತ ದೇವ ಮಾನವನಿಗೆ ಇದರಿಂದ ಮತ್ತೆ ಜೈಲೇ ಗತಿಯಾಗಿದೆ. ಅಸರಾಂ ಸೇರಿ ಐವರನ್ನು ವಿಶೇಷ ಕೋರ್ಟ್ ಅಪರಾಧಿ ಎಂದು ಘೋಷಿಸಿದೆ. ಕಳೆದ ನಾಲ್ಕು ವರ್ಷದಿಂದ ಜೈಲಿನಲ್ಲಿರುವ  ಅಸರಾಂ ಇನ್ನಷ್ಟು ವರ್ಷಗಳ ಕಾಲ ಜೈಲಿನಲ್ಲೇ ಕಳೆಯಬೇಕಿದೆ.

ಮಧ್ಯಪ್ರದೇಶದ ಚಿಂಡ್ವಾರಾದಲ್ಲಿರುವ ಆಸಾರಾಂ ಆಶ್ರಯದಲ್ಲಿ ಇದ್ದ ವೇಳೆ 1997-2006ರ ಅವಧಿಯಲ್ಲಿ ಆಸಾರಾಂ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಉತ್ತರಪ್ರದೇಶದ ಶಹಜಹಾನ್‌ಪುರ ಮೂಲದ ಬಾಲಕಿಯೊಬ್ಬಳು 2013ರಲ್ಲಿ ದೂರು ಸಲ್ಲಿಸಿದ್ದಳು. ಈ ಹಿನ್ನೆಲೆಯಲ್ಲಿ ಅದೇ ವರ್ಷ ಆಸಾರಾಂನನ್ನು ಬಂಧಿಸಲಾಗಿತ್ತು. ಅಂದಿನಿಂದಲೂ ಬಾಪು ಜೈಲಲ್ಲೇ ಇದ್ದು, ಇದೀಗ ವಿಚಾರಣೆ ಪೂರ್ಣಗೊಂಡು ತೀರ್ಪು ಪ್ರಕಟಗೊಂಡಿದೆ. 

loader