Asianet Suvarna News Asianet Suvarna News

ಹಿಂದೂಗಳು ಕಲಬೆರಕೆಗಳಾಗಿದ್ದಾರೆ: ಜಗ್ಗೇಶ್ ಆಕ್ರೋಶ

ಬೇರೆ ಧರ್ಮದವರಿಗಿಂತ ಹಿಂದೂಗಳು ಇತ್ತೀಚೆಗೆ ಕಲಬೆರಕೆಗಳಾಗಿದ್ದು, ಯಾರೊಬ್ಬರು ಬೇರೆ ಧರ್ಮದ ಬಗ್ಗೆ ಪ್ರಶ್ನೆ ಮಾಡುವುದಿಲ್ಲ ಎಂದು ಬಿಜೆಪಿ ಮುಖಂಡ, ಖ್ಯಾತ ಚಿತ್ರನಟ ಜಗ್ಗೇಶ್‌ ಗೋಹತ್ಯೆ ಪರ ವಾಗಿರುವವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

JaggeshHindus Will Not Raise Question Against Other Religions Says Jaggesh
  • Facebook
  • Twitter
  • Whatsapp

ಬೆಂಗಳೂರು(ಜೂ.28): ಬೇರೆ ಧರ್ಮದವರಿಗಿಂತ ಹಿಂದೂಗಳು ಇತ್ತೀಚೆಗೆ ಕಲಬೆರಕೆಗಳಾಗಿದ್ದು, ಯಾರೊಬ್ಬರು ಬೇರೆ ಧರ್ಮದ ಬಗ್ಗೆ ಪ್ರಶ್ನೆ ಮಾಡುವುದಿಲ್ಲ ಎಂದು ಬಿಜೆಪಿ ಮುಖಂಡ, ಖ್ಯಾತ ಚಿತ್ರನಟ ಜಗ್ಗೇಶ್‌ ಗೋಹತ್ಯೆ ಪರ ವಾಗಿರುವವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮೇಖ್ರಿ ವೃತ್ತದಲ್ಲಿ ಮಂಗಳವಾರ ಕೆಂಪೇಗೌಡ ಜಯಂತಿ ಪ್ರಯುಕ್ತ ಗಡಿಗೋಪುರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ಕೆಲವು ಗೋಮಾಂಸ ತಿನ್ನುತ್ತೇವೆ ಎಂಬ ಹೇಳಿಕೆ ನೀಡುವವರು ಬೇರೆ ಧರ್ಮದ ಬಗ್ಗೆ ಮಾತನಾ ಡಿದರೆ ಗಲಾಟೆ ನಡೆಸಲಾಗು ತ್ತದೆ. ಯಾರೊಬ್ಬರು ಬೇರೆ ಧರ್ಮದ ಬಗ್ಗೆ ಪ್ರಶ್ನೆ ಮಾಡು ವುದಿಲ್ಲ. ಹಿಂದೂಗಳು ಮಾತ್ರ ಕಲಬೆರಕೆಯಾಗಿದ್ದಾರೆ ಎಂದು ಕಿಡಿಕಾರಿದರು.

ಹಿಂದೂಗಳ ಕುರಿತು ಹಾಗೂ ದೇವರ ನಂಬಿಕೆ ಬಗ್ಗೆ ಮಾಧ್ಯಮಗಳು ಗಂಟೆಗಟ್ಟಲೇ ಚರ್ಚೆ ಮಾಡುತ್ತವೆ. ಇದನ್ನು ಜನ ಕಣ್ಣುಬಿಟ್ಟು ನೋಡುತ್ತಾರೆ. ಇಂತಹ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಭಗವದ್ಗೀತೆ ಎಲ್ಲಿದೆ, ದೇವರು ಎಲ್ಲಿದೆ ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎಂದ ಅವರು, ಕೆಂಪೇಗೌಡ ಅವರು ತಾವೊಬ್ಬರೇ ಬದುಕುವುದನ್ನು ಯೋಚನೆ ಮಾಡಿಲ್ಲ. ನಾಡಿನ ಜನತೆ ನೆಮ್ಮದಿಯಿಂದ ಸಂಪ್ರದಾಯದಂತೆ ಬದುಕಲು ಬೆಂಗಳೂರು ಕಟ್ಟಿದ್ದಾರೆ ಎಂದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಅಶ್ವತ್ಥ ನಾರಾ ಯಣ, ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ಇದ್ದರು.

Follow Us:
Download App:
  • android
  • ios