ಇವತ್ತಿನ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ಮುಖಂಡ ನಟ, ಜಗ್ಗೇಶ್  ಬಿಜೆಪಿ ಪರ ಮತಯಾಚನೆ ವೇಳೆ ಜೆಡಿಎಸ್ ವರಿಷ್ಠ ದೇವೇಗೌಡರು ಓಟ್ ಕೇಳಲು ಬಂದ್ರೂ ಮತಹಾಕಬೇಡಿ ಎಂದು ಹೇಳುವ ಭರದಲ್ಲಿ ದೇವೇಗೌಡರ ಬಗ್ಗೆ ಮಿಮಿಕ್ರಿ ಮಾಡಿದರು.  ಇದಕ್ಕೆ ಗೌಡರು ಕೂಡ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ನ.03): ಇವತ್ತಿನ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ಮುಖಂಡ ನಟ, ಜಗ್ಗೇಶ್ ಬಿಜೆಪಿ ಪರ ಮತಯಾಚನೆ ವೇಳೆ ಜೆಡಿಎಸ್ ವರಿಷ್ಠ ದೇವೇಗೌಡರು ಓಟ್ ಕೇಳಲು ಬಂದ್ರೂ ಮತಹಾಕಬೇಡಿ ಎಂದು ಹೇಳುವ ಭರದಲ್ಲಿ ದೇವೇಗೌಡರ ಬಗ್ಗೆ ಮಿಮಿಕ್ರಿ ಮಾಡಿದರು. ಇದಕ್ಕೆ ಗೌಡರು ಕೂಡ ತಿರುಗೇಟು ನೀಡಿದ್ದಾರೆ.

ನಿನ್ನೆಯಿಂದ ರಾಜ್ಯದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಶುರುವಾಗಿದೆ. ಇವತ್ತು ತುಮಕೂರಿನ ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್​​ ಜೆಡಿಎಸ್ ಗೆ ಮತಹಾಕಿ ಎಂದು ದೇವೇಗೌಡರು ಕೇಳಿಕೊಂಡರೂ ಹಾಕಬೇಡಿ. ಜೆಡಿಎಸ್'ನವರು ಒಕ್ಕಲಿಗರ ಓಟ್ ಬ್ಯಾಂಕ್ ಮುಂದಿಟ್ಟುಕೊಂಡು ಮತ ಕೇಳ್ತಾರೆ ಎಂದು ದೇವೇಗೌಡರ ಬಗ್ಗೆ ಜಗ್ಗೇಶ್ ಮಿಮಿಕ್ರಿ ಮಾಡಿ ನೆರೆದಿದ್ದ ಜನರನ್ನು ನಗಿಸಿದರು. ಈ ಹೇಳಿಕೆಗೆ ನೆಲಮಂಗಲದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ. ಜಗ್ಗೇಶ್ ದೊಡ್ಡವರು, ಚಿತ್ರನಟರು ಅವರು ತುಂಬಾ ದೊಡ್ಡವರು. ಜಗ್ಗೇಶ್​ ಬಗ್ಗೆ ನಾನು ಮಾತನಾಡಲು ಸಾಧ್ಯನಾ? ಅಂತ ಟಾಂಗ್​ ನೀಡಿದರು.