ಭಗವದ್ಗೀತೆ ಎಲ್ಲಿದೆ. ದೇವರು ಎಲ್ಲಿದ್ದಾನೆ. ನಾವು ಗೋಮಾಂಸ ತಿನ್ನುತ್ತೇವೆ ಅಂತಾರೆ.ಆದರೆ ಬೇರೆ ಧರ್ಮದ ಬಗ್ಗೆ ಯಾರಾದರೂ ಮಾತಾನಾಡಿದರೆ ದೊಡ್ಡ ಗಲಾಟೆಗಳೆ ನಡೆದು ಹೋಗ್ತವೆ' ಎಂದು ಗೋಮಾಂಸ ಸೇವಿಸುವವರ ವಿರುದ್ಧ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಜೂ.27): ಗೋಹತ್ಯೆ ಪರವಾಗಿರುವವರಿಗೆ ತಮ್ಮ ಡೈಲಾಗ್ ಮೂಲಕ ಟಾಂಗ್ ಕೊಟ್ಟ ನವರಸ ನಾಯಕ 'ಹಿಂದೂಗಳ ಬಗ್ಗೆ ದೇವರು,‌ ನಂಬಿಕೆ ಬಗ್ಗೆ ಮಾಧ್ಯಮಗಳು ಗಂಟೆಗಟ್ಟಲೆ ಚರ್ಚೆ ಮಾಡ್ತಾರೆ. ಇದನ್ನ ಜನ ಕಣ್ಣು ಬಿಟ್ಟು ನೋಡ್ತಾರೆ. ಈ ಮನಸ್ಥಿತಿ ಜನ ಬದಲಿಸಿಕೊಳ್ಳಬೇಕು. ಭಗವದ್ಗೀತೆ ಎಲ್ಲಿದೆ. ದೇವರು ಎಲ್ಲಿದ್ದಾನೆ. ನಾವು ಗೋಮಾಂಸ ತಿನ್ನುತ್ತೇವೆ ಅಂತಾರೆ.ಆದರೆ ಬೇರೆ ಧರ್ಮದ ಬಗ್ಗೆ ಯಾರಾದರೂ ಮಾತಾನಾಡಿದರೆ ದೊಡ್ಡ ಗಲಾಟೆಗಳೆ ನಡೆದು ಹೋಗ್ತವೆ' ಎಂದು ಗೋಮಾಂಸ ಸೇವಿಸುವವರ ವಿರುದ್ಧ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರೊಬ್ಬರು ಬೇರೆ ಧರ್ಮದ ಬಗ್ಗೆ ಪ್ರಶ್ನೆ ಮಾಡೊಲ್ಲ. ಹಿಂದೂಗಳು ಮಾತ್ರ ಇಂದು ‌ಕಲಬೆರೆಕೆಗಳು ಆಗಿದ್ದಾರೆ. ತಾವು ಬೆಂಗಳೂರಿನಲ್ಲಿ ನಡೆದ ಕಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ಕುರಿತು ಜಾತಿಗುರುತು ಕಟ್ಟಿರುವುದಕ್ಕೆ ಟ್ವೀಟ್'ನಲ್ಲಿ ಪ್ರಶ್ನಿಸಿರುವ ಅವರು, ನಾನುವಿಶ್ವಕ್ಕೆ ಬಂದಿದ್ದೇ ಆ ಕುಲದಿಂದ. ಅದರಲ್ಲಿ ಭಾಗವಹಿಸಿದ್ದು ಜಾತಿಗುರುತೆ. ನನ್ನಕುಲ ಮನುಕುಲ. ಕೆಲವರಿಗೆ ಬೆಂಗಳೂರಿನ ಸವಲತ್ತು ಬೇಕು ಆದರೆ ಈ ನಾಡು ಕಟ್ಟಿದ ಆಚರಣೆಯನ್ನು ವಿರೋಧಿಸುತ್ತಾರೆ' ಎಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ್ದಾರೆ.