ಭಕ್ತರಿಂದ ದಕ್ಷಿಣೆ ಸ್ವೀಕರಿಸದಂತೆ ದೇವಾಲಯ ಸಿಬ್ಬಂದಿಗೆ ಸೂಚನೆ

Jagannath temple servitors asked not to take donations from devotees
Highlights

ದೇವಸ್ಥಾನದ ಆಡಳಿತ ನಿರ್ವಹಣೆ ಕರ್ನಾಟಕದ ಧರ್ಮಸ್ಥಳ ದೇವಾಲಯವನ್ನು ನೋಡಿ ಕಲಿಯಿರಿ ಎಂದು ಸುಪ್ರೀಂ ಕೋರ್ಟ್‌ ತರಾಟೆಗೆ ಗುರಿಯಾಗಿದ್ದ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿ ಶನಿವಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. 

ಭುವನೇಶ್ವರ: ದೇವಸ್ಥಾನದ ಆಡಳಿತ ನಿರ್ವಹಣೆ ಕರ್ನಾಟಕದ ಧರ್ಮಸ್ಥಳ ದೇವಾಲಯವನ್ನು ನೋಡಿ ಕಲಿಯಿರಿ ಎಂದು ಸುಪ್ರೀಂ ಕೋರ್ಟ್‌ ತರಾಟೆಗೆ ಗುರಿಯಾಗಿದ್ದ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿ ಶನಿವಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. 

ಆ ಪ್ರಕಾರ, ಮುಖ್ಯವಾಗಿ ದೇವಸ್ಥಾನದಲ್ಲಿ ಯಾವುದೇ ಸಿಬ್ಬಂದಿ ಭಕ್ತರಿಂದ ದಕ್ಷಿಣೆ ಅಥವಾ ಕಾಣಿಕೆಗಳನ್ನು ಸ್ವೀಕರಿಸಕೂಡದು ಎಂದು ಸುತ್ತೋಲೆಯೊಂದರಲ್ಲಿ ತಿಳಿಸಲಾಗಿದೆ. ಭಕ್ತರು ತಮ್ಮ ದಕ್ಷಿಣೆ, ಕಾಣಿಕೆಗಳನ್ನು ಸಿಬ್ಬಂದಿಗೆ ನೀಡದೆ, ಹುಂಡಿಯಲ್ಲೇ ಹಾಕುವಂತೆ, ಅಥವಾ ದೇವಸ್ಥಾನದ ಕಚೇರಿಗಳಲ್ಲಿ ನೀಡಿ, ರಶೀದಿ ಪಡೆಯುವಂತೆ ವಿನಂತಿಸಲಾಗಿದೆ.

loader