ಸೆ.1ರಂದು ನಕಲಿ (ಶೆಲ್) ಕಂಪನಿಗಳ 1 ಲಕ್ಷ ಅನರ್ಹ ನಿರ್ದೇಶಕರ ಹೆಸರನ್ನು ‘ಹೆಸರಿಸಿ..ಅವಮಾನಿಸಿ’ (ನೇಮ್ ಆ್ಯಂಡ್ ಶೇಮ್) ನೀತಿಯ ಅನ್ವಯ 2 ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ, ಈಗ ಮತ್ತೆ ಇನ್ನೂ 2 ಲಕ್ಷ ಅನರ್ಹ ನಿರ್ದೇಶಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ನವದೆಹಲಿ: ಸೆ.1ರಂದು ನಕಲಿ (ಶೆಲ್) ಕಂಪನಿಗಳ 1 ಲಕ್ಷ ಅನರ್ಹ ನಿರ್ದೇಶಕರ ಹೆಸರನ್ನು ‘ಹೆಸರಿಸಿ..ಅವಮಾನಿಸಿ’ (ನೇಮ್ ಆ್ಯಂಡ್ ಶೇಮ್) ನೀತಿಯ ಅನ್ವಯ 2 ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ, ಈಗ ಮತ್ತೆ ಇನ್ನೂ 2 ಲಕ್ಷ ಅನರ್ಹ ನಿರ್ದೇಶಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರಲ್ಲಿ ಕರ್ನಾ ಟಕದ 20,924 ಅನರ್ಹ ನಿರ್ದೇಶಕರ ಹೆಸರುಗಳೂ ಸೇರಿವೆ. 2 ಸತತ ವರ್ಷಗಳ ವಿತ್ತೀಯ ವಿವರಗ ಳನ್ನು ಕೇಂದ್ರ ಕಂಪನಿ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸದ ಕಂಪನಿಗಳ ಪಟ್ಟಿ ಮತ್ತು ಅವುಗಳ ನಿರ್ದೇಶಕರ ಹೆಸರುಗಳು ಇದರಲ್ಲಿ ಇವೆ.

ಇವುಗಳನ್ನು ನಕಲಿ ಕಂಪನಿ ಗಳು ಮತ್ತು ಅದರ ನಿರ್ದೇಶಕರನ್ನು ಅನರ್ಹ ನಿರ್ದೇಶಕರು ಎಂದು ಪರಿಗಣಿಸಲಾಗಿದೆ.

ಕರ್ನಾಟಕದ ಪ್ರಮುಖರು:

ಜಗದೀಶ್ ಶುಗರ್ಸ್‌ನ ಶಿಲ್ಪಾ ಶೆಟ್ಟರ್, ಸಂಕಲ್ಪ ಶೆಟ್ಟರ್, ಪ್ರಶಾಂತ್ ಶೆಟ್ಟರ್ (ಮಾಜಿ ಸಿಎಂ ಜಗದೀಶ ಶೆಟ್ಟರ್ ಕುಟುಂಬ), ಲಕ್ಷ್ಮಣ ರಾವ್ ಜಾರಕಿಹೊಳಿ ಶುಗರ್ಸ್‌ನ ರಮೇಶ ಜಾರಕಿಹೊಳಿ, ಲಕ್ಕಣ್ಣ ಜಾರಕಿಹೊಳಿ, ಲಕ್ಷ್ಮಣರಾವ್ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ, ಸುವರ್ಣ ಜಾರಕಿಹೊಳಿ (ಸಚಿವ ಜಾರಕಿಹೊಳಿ ಕುಟುಂಬ), ರಾಯಲ್ ಶುಗರ್ಸ್ ಲಿಮಿಟೆಡ್‌ನ ರವಿಕಾಂತ ಪಾಟೀಲ, ಬೀರೇಶ್ವರ ಮಾರ್ಕೆಟಿಂಗ್‌ನ ಅಣ್ಣಾಸಾಹೇಬ ಜೊಲ್ಲೆ, ಕ್ವಾಲಿಟಿ ಪ್ರಾಪರ್ಟಿ ಮ್ಯಾನೇಜ್‌ಮೆಂಟ್‌ನ ಲಿಯಾಂಡರ್ ಪೇಸ್ (ಟೆನಿಸ್ ಪಟು), ಎಎಲ್‌ವಿ ಪ್ರಾಜೆಕ್ಟ್ಸ್‌ನ ನಂದಿನಿ ಆಳ್ವ, ಪ್ರಿಯಾಂಕಾ ಒಬೆರಾಯ್ (ಜೀವರಾಜ ಆಳ್ವ ಕುಟುಂಬ), ಜೆ.ಎಚ್. ಪಟೇಲ್ ಹೋಟೆಲ್ಸ್ ಇಂಡಿಯಾ ಪ್ರೈ.ಲಿ.ನ ಮಹಿಮಾ ಪಟೇಲ್ (ಜೆ.ಎಚ್.ಪಟೇಲ್ ಕುಟುಂಬ).