ಕೊಲ್ಕತ್ತಾ [ ಜ. 16]  ಯುವತಿಯರ ಕನ್ಯತ್ವದ ಬಗ್ಗೆ ಅಶ್ಲೀಲವಾಗಿ ಪಶ್ಚಿಮ ಬಂಗಾಳದ ಪ್ರೊಫೆಸರ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡು ನಂತರ ಡಿಲೀಟ್ ಮಾಡಿದ್ದರು.  ಜಾಧವ್‍ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಕನಕ್ ಸರ್ಕಾರ್ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.

ಈ ಬಗ್ಗೆ ಹೇಳಿಕೆ ನೀಡಿರುವ ವಿದ್ಯಾರ್ಥಿನಿಯರು ಪೋಲಿ ಪ್ರೊಫೆಸರ್ ಕ್ಲಾಸ್ ರೂಂನಲ್ಲಿ ಮಾಡುತ್ತಿದ್ದ ಕುಚೇಷ್ಟೆಗಳನ್ನು ಬಿಚ್ಚಿಟ್ಟಿದ್ದಾರೆ. ರೋಶಿನಿ ಚಕ್ರವರ್ತಿ ಎಂಬ ವಿದ್ಯಾರ್ಥಿನಿ ಕರಾಳ ಅನುಭವದ ಮುಖ ಬಿಚ್ಚಿಟ್ಟಿದ್ದಾರೆ.

ನಾನು ಮೊದಲನೆ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪ್ರಸಂಟೇಶನ್ ನೀಡುವ ಸಂಬಂಧ ಕನಕ್‌ ಸರ್ಕಾರ್ ಅವರ ಕೊಠಡಿಗೆ ತೆರಳಿದ್ದೆ. ಈ ವೇಳೆ ನನ್ನೊಂದಿಗೆ ಮಾತನಾಡುತ್ತ ಪ್ರೊಫೆಸರ್,  ನಾವಿಬ್ಬರು ಒಂದೇ ನದಿಯಲ್ಲಿ ಒಟ್ಟಿಗೆ ಸ್ನಾನ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದರು.. ಆ ಸಂದರ್ಭ ನನಗೆ ಇದು ದೌರ್ಜನ್ಯ ಎಂಬ ಅರಿವು ಮೂಡಿರಲಿಲ್ಲ ಎಂದು ಹೇಳಿದ್ದಾರೆ.

ಕನ್ಯತ್ವ ಅನ್ನೋದು ಸೀಲ್ಡ್ ಬಾಟಲ್‌!

ಇನ್ನೊಬ್ಬ ವಿದ್ಯಾರ್ಥಿನಿ ಸೋಮಶ್ರೀ ಚೌಧರಿ ಹೇಳುವಂತೆ, ಪ್ರೊಫೆಸರ್ ಕ್ಲಾಸ್ ರೂಂನಲ್ಲಿಯೂ ಸದಾ ಕುಚೇಷ್ಟೆ ಮಾಡುತ್ತಲೇ ಕಾಲ ಕಳೆಯುತ್ತಿದ್ದರು. ಸದಾ ಲೈಂಗಿಕ ವಿಚಾರಗಳಬಗ್ಗೆ ಮಾತನಾಡುತ್ತಾ, ಹೆಣ್ಣು ಮಕ್ಕಳು ಹೇಗೆ ಡ್ರೇಸ್ ಮಾಡಿಕೊಳ್ಳಬೇಕು ಎಂಬ ಕಮೆಂಟ್ ಮಾಡುತ್ತಿದ್ದರು  ಎಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರೋಫೆಸರ್ ವಿರುದ್ಧ ನಿರಂತರವಾಗಿ ಪ್ರತಿಕ್ರಿಯೆಗಳು ಬರುತ್ತಲೇ ಇದ್ದವು. ಇದೆಲ್ಲವನ್ನು ಗಮನಿಸಿದ ವಿಶ್ವವಿದ್ಯಾನಿಲಯದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಓಂಪ್ರಕಾಶ್ ಮೀಶ್ರಾ ವಿವಾದಿತ ಕಮೆಂಟ್ ಹಾಕಿದ್ದ ಪ್ರೊಫೆಸರ್‌ಗೆ ಗೇಟ್ ಪಾಸ್ ನೀಡಿದ್ದಾರೆ.