ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್ ಪ್ರಧಾನಿ

Jacinda Ardern baby: New Zealand PM gives birth to girl
Highlights

ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್ ಪ್ರಧಾನಿ

ಅಧಿಕಾರದಲ್ಲಿದ್ದಾಗಲೇ ತಾಆಯಿಯಾದ ವಿಶ್ವದ ಎರಡನೇ ಪ್ರಧಾನಿ

ನ್ಯೂಜಿಲ್ಯಾಂಡ್ ನ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ

ಹೆಣ್ಣು ಮಗುವಿಗೆ ಜನ್ಮ ನೀಡಿದ ಜಸಿಂದಾ ಅರ್ಡೆರ್ನ್

ಅಧಿಕಾರದಲ್ಲಿದ್ದಾಗ ತಾಯಿಯಾಗಿದ್ದ ಪಾಕ್ ಮಾಜಿ ಪಿಎಂ ಬೆನಜಿರ್ ಭುಟ್ಟೋ

ವೆಲ್ಲಿಂಗ್ಟನ್(ಜೂ.21): ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ ವಿಶ್ವದ ಎರಡನೇ ಪ್ರಧಾನಿಯಾಗಿದ್ದಾರೆ. ತಮ್ಮ ಮಗು ಹಾಗೂ ಪತ್ನಿಯೊಂದಿಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

37ರ ಹರೆಯದ ಜಸಿಂದಾ ನ್ಯೂಜಿಲೆಂಡ್ ನ ಅತೀ ಕಿರಿಯ ಪ್ರಧಾನಿಯಾಗಿದ್ದು, ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಈಗ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಮೂಲಕ ಅಧಿಕಾರವಧಿಯಲ್ಲಿ ತಾಯಿಯಾದ ನ್ಯೂಜಿಲ್ಯಾಂಡ್ ನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ಜಸಿಂದಾ ಅರ್ಡೆರ್ನ್ ಆರು ವಾರಗಳ ಹೆರಿಗೆ ರಜೆಯಲ್ಲಿದ್ದು, ಇವರ ಕೆಲಸವನ್ನು ಉಪ ಪ್ರಧಾನಿ ವಿನ್ಸ್ಟನ್ ಪೀಠರ್ ನಿರ್ವಹಿಸುತ್ತಿದ್ದಾರೆ. ನ್ಯೂಜಿಲ್ಯಾಂಡ್‌ನ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಅಕ್ಲಂಡ್ ನಲ್ಲಿ ಹೆರಿಗೆಯಾಗಿದ್ದು, ಪತಿ ಟಿ.ವಿ ನಿರೂಪಕ ಕ್ಲಾರ್ಕ್ ಗೇಪೋರ್ಡ್ ಈ ಸಂದರ್ಭದಲ್ಲಿ ಅವರ ಜತೆಗಿದ್ದರು. ಈ ಹಿಂದೆ ಪಾಕ್ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ 1990ರಲ್ಲಿ ತಮ್ಮ ಅಧಿಕಾವಧಿಯಲ್ಲಿ ತಾಯಿಯಾಗಿದ್ದರು.

loader