Asianet Suvarna News Asianet Suvarna News

ಕಾಶ್ಮೀರ ರಾಜಕೀಯ ನಾಯಕರಿಗೆ ಮತ್ತೆ ಭದ್ರತೆ ನೀಡಿದ ಸರ್ಕಾರ!

ಕಣಿವೆ ರಾಜಕೀಯ ನಾಯಕರಿಗೆ ಮತ್ತೆ ಭದ್ರತೆ| ರಾಜಕೀಯ ನಾಯಕರು ಮತ್ತು ಕಾರ್ಯಕರ್ತರಿಗೆ ಮತ್ತೆ ಭಧ್ರತೆ| ಮತ್ತೆ ಭದ್ರತೆ ಒದಗಿಸುವ ನಿರ್ಧಾರ ಕೈಗೊಂಡ ರಾಜ್ಯಪಾಲ್ ಸತ್ಯಪಾಲ್ ಮಲಿಕ್| ಪ್ರತ್ಯೇಕತಾವಾದಿಗಳಿಗೆ ಭದ್ರತೆ ನೀಡಲು ಸ್ಪಷ್ಟ ನಿರಾಕರಣೆ| 

J&K Govt Restores Security Cover of Politicians
Author
Bengaluru, First Published Apr 8, 2019, 5:57 PM IST

ನವದೆಹಲಿ(ಏ.08): ಪುಲ್ವಾಮಾ ಉಗ್ರ ದಾಳಿಯ ಬಳಿಕ ಹಿಂಪಡೆಯಲಾಗಿದ್ದ40 ರಾಜಕಾರಣಿಗಳ ಹಾಗೂ ಕಾರ್ಯಕರ್ತರ ಭದ್ರತೆಯನ್ನು ಜಮ್ಮು-ಕಾಶ್ಮೀರ ಸರ್ಕಾರ ಮತ್ತೆ ಮರಳಿಸಿದೆ.

 ರಾಜ್ಯಪಾಲ ಸತ್ಯಪಾಲ್ ಮಲಿಕ್ ರಾಜಕೀಯ ನಾಯಕರಿಗೆ ಮರಳಿ ಭದ್ರತೆ ನೀಡುವ ನಿರ್ಧಾರ ತೆಗೆದುಕೊಂಡಿದ್ದು,  ಪ್ರತ್ಯೇಕವಾದಿಗಳಿಗೆ ಮಾತ್ರ ಮರಳಿ ಭದ್ರತೆ ನೀಡಲು ನಿರಾಕರಿಸಿದ್ದಾರೆ.

ಕಣಿವೆಯ ಪ್ರಮುಖ ರಾಜಕಾರಣಿಗಳ ಜೀವಕ್ಕೆ ಅಪಾಯ ಇದೆ ಎಂದು ಆರೋಪಿಸಿ, ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಅದರಂತೆ ಈ ನಾಯಕರಿಗೆ ಮತ್ತೆ ಒದಗಿಸುವ ನಿರ್ಧಾರಕ್ಕೆ ಬರಲಾಗಿದೆ.
 

Follow Us:
Download App:
  • android
  • ios