ಮುಫ್ತಿ ಮೆಹಬೂಬಾ ನೇತೃತ್ವದ ಆಡಳಿತ ಬೇಸಿಗೆ ರಾಜಧಾನಿ ಶ್ರೀನಗರದಿಂದ ಜಮ್ಮುವಿಗೆ ವರ್ಗಾವಣೆಯಾಗಿ ಕಾರ್ಯಾರಂಭ ಮಾಡಿದೆ.

ಜಮ್ಮು(ನ.07): ಸ್ವತಂತ್ರ ಪೂರ್ವದಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯದಂತೆ ಜಮ್ಮು-ಕಾಶ್ಮೀರದ ಸಿಎಂ ಮುಫ್ತಿ ಮೆಹಬೂಬಾ ನೇತೃತ್ವದ ಆಡಳಿತ ಬೇಸಿಗೆ ರಾಜಧಾನಿ ಶ್ರೀನಗರದಿಂದ ಜಮ್ಮುವಿಗೆ ವರ್ಗಾವಣೆಯಾಗಿ ಕಾರ್ಯಾರಂಭ ಮಾಡಿದೆ. ಈ ಪ್ರಕಾರವಾಗಿ ಸೋಮವಾರ ಜಮ್ಮುವಿನಲ್ಲಿರುವ ಆಡಳಿತ ಕಚೇರಿ, ರಾಜಭವನ, ಪೊಲೀಸ್ ಕೇಂದ್ರ ಕಚೇರಿ ಮತ್ತು ಇತರೆ ಕಚೇರಿಗಳನ್ನು ತೆರೆಯಲಾಯಿತು. ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿತು. ಜಮ್ಮು-ಕಾಶ್ಮೀರದ ಮೂರು ಪ್ರಾಂತ್ಯಗಳಲ್ಲಿರುವ ಎಲ್ಲ ವರ್ಗದ ಜನರನ್ನು ತಲುಪಲು ಸಾಧ್ಯವಾಗುವಂತೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಡಿಸಿಎಂ ಡಾ.ನಿರ್ಮಲಾ ಸಿಂಗ್ ಹೇಳಿದರು.