ತಮಿಳುನಾಡಿನ ಸಿಎಂ ಜೆ. ಜಯಲಲಿತಾ ನಿನ್ನೆ ತಡರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 1990 ರಲ್ಲಿ AIADMK ಪಕ್ಷವನ್ನು ಒಗ್ಗೂಡಿಸಿದ ಜಯಲಲಿತಾ 1991 ರಲ್ಲಿ ಬಹುಮತ ಪಡೆಯುವ ಮೂಲಕ ತಮಿಳುನಾಡು ರಾಜಕೀಯ ವಲಯದಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದರು. ಹೀಗೆ ರಾಜಕೀಯ ರಂಗಪ್ರವೇಶ ಮಾಡಿದ್ದ ಜಯಾ 1999ರ ವೇಳೆಗೆ ರಾಷ್ಟ್ರ ರಾಜಕಾರಣದಲ್ಲೂ ಹೆಜ್ಜೆ ಇಟ್ಟಿದ್ದರು.

ನವದೆಹಲಿ(ಡಿ.06): ತಮಿಳುನಾಡಿನ ಸಿಎಂ ಜೆ. ಜಯಲಲಿತಾ ನಿನ್ನೆ ತಡರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 1990 ರಲ್ಲಿ AIADMK ಪಕ್ಷವನ್ನು ಒಗ್ಗೂಡಿಸಿದ ಜಯಲಲಿತಾ 1991 ರಲ್ಲಿ ಬಹುಮತ ಪಡೆಯುವ ಮೂಲಕ ತಮಿಳುನಾಡು ರಾಜಕೀಯ ವಲಯದಲ್ಲಿ ತನ್ನ ಛಾಪು ಮೂಡಿಸಲು ಯಶಸ್ವಿಯಾಗಿದ್ದರು. ಹೀಗೆ ರಾಜಕೀಯ ರಂಗಪ್ರವೇಶ ಮಾಡಿದ್ದ ಜಯಾ 1999ರ ವೇಳೆಗೆ ರಾಷ್ಟ್ರ ರಾಜಕಾರಣದಲ್ಲೂ ಹೆಜ್ಜೆ ಇಟ್ಟಿದ್ದರು.

Add Asianetnews Kannada as a Preferred SourcegooglePreferred

17 ಎಪ್ರಿಲ್ 1999ರ ಆ ದಿನ...

1999ರ ಎಪ್ರಿಲ್ 17 ದಿನಾಂಕವನ್ನು ಯಾರು ತಾನೆ ಮರೆಯಲು ಸಾಧ್ಯ? ಯಾಕೆಂದರೆ ಅದೇ ದಿನ 13 ತಿಂಗಳು ದೇಶದಲ್ಲಿ ಆಡಳಿತ ನಡೆಸಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಕೇವಲ ಒಂದು ಮತದ ಅಂತರದಿಂದ ಬಿದ್ದಿತ್ತು. ಅಲ್ಲವಯವರೆಗೂ ಜಯಲಲಿತಾ ಸೋನಿಯಾ ಗಾಂಧಿಗೆ ಆಪ್ತರಾಗಿರಲಿಲ್ಲ. ಆದರೆ ಮಾರ್ಚ್ 1999ರಲ್ಲಿ ಸೋನಿಯಾ ಹಾಗೂ ಜಯಲಲಿತಾ ಪರಸ್ಪರ ಭೇಟಿಯಾಗಿದ್ದರು. ಈ ಭೇಟಿಯ ಬಳಿಕವೇ ವಾಜಪೇಯಿ ಸರ್ಕಾರದೊಂದಿಗಿನ ತನ್ನ ಬೆಂಬಲವನ್ನು ಹಿಂತೆಗೆಯಲು ಜಯಲಲಿತಾ ಮುಂದಾಗಿದ್ದರಂತೆ. ಇದಾದ ಬಳಿಕ ನಡೆದಿರುವುದೆಲ್ಲವೂ ಈಗ ಇತಿಹಾಸ, ಇವೆಲ್ಲದರ ಬಳಿಕ ಉತ್ತರ ಭಾರತದ ಜನರ ಬಾಯಿಯಲ್ಲಿ ಜಯಲಲಿತಾ ಹೆಸರು ಅಚ್ಚಳಿಯದೆ ಉಳಿಯಿತು.

ಆದರೆ ಇನ್ನು ಕೆಲವು ವಿಶ್ಲೇಷಕರು ಅನ್ವಯ 'ಅಟಲ್ ವಾಜಪೇಯಿ ಸರ್ಕಾರದ ಅನುಯಾಯಿಯಾಗಿದ್ದ ಜಯಲಲಿತಾ ತತ್ಕಾಲಿಕವಾಗಿ ಡಿಎಂಕೆ ಸರ್ಕಾರವನ್ನು ವಜಾಗೊಳಿಸುವ ಬೇಡಿಕೆಯ ಮೇಲಿನ ಸಮರ್ಥನೆಯನ್ನು ಹಿಂಪಡೆಯುವಂತೆ ಹೆದರಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಜಯಲಲಿತಾ ತನ್ನ ಮೇಲಿರುವ ಭ್ರಷ್ಟಾಚಾರ ಆರೋಪಗಳಿಂದ ನುಣುಚಿಕೊಳ್ಳಲು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷ ಆರೋಪಿಸಿತ್ತು. ಎರಡೂ ಸರ್ಕಾರಗಳ ನಡುವೆ ಸಾಮರಸ್ಯ ಮೂಡಲಿಲ್ಲ ಹೀಗಾಗಿ ಜಯಲಲಿತಾ ಬಿಜೆಪಿಗೆ ನೀಡುತ್ತಿದ್ದ ಬೆಂಬಲವನ್ನು ಹಿಂಪಡೆದರು. ಇದರಿಂದಾಗಿ ಬಿಜೆಪಿ ಪಕ್ಷದ ಸಂಸದ ಅಟಲ್ ಬಿಹಾರಿ ವಾಜಪೇಯಿ ಕೇವಲ ಒಂದು ಮತದ ಅಭಾವದಿಂದಾಗಿ ಸೋಲನುಭವಿಸಬೇಕಾಯಿತು.