ಒಂದೇ ದಿನ 50 ಲಕ್ಷ ಜನರಿಂದ ಐಟಿಆರ್ ಸಲ್ಲಿಕೆ: ಹೊಸ ವಿಶ್ವ ದಾಖಲೆ!
ಆದಾಯ ತೆರಿಗೆ ರಿಟನ್ಸ್‌ರ್ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಆ.31ರಂದು ದೇಶಾದ್ಯಂತ ಭರ್ಜರಿ 49,29,121 ತನ್ನ ಆನ್‌ಲೈನ್ ಮೂಲಕ ಐಟಿಆರ್ ಸಲ್ಲಿಕೆ ಮಾಡಿದ್ದಾರೆ. ಇದು ಭಾರತೀಯ ಆದಾಯ ತೆರಿಗೆ ಇಲಾಖೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣದ ಸಲ್ಲಿಕೆಯಾಗಿದೆ.
ನವದೆಹಲಿ (ಸೆ. 02): ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಆ.31ರಂದು ದೇಶಾದ್ಯಂತ ಭರ್ಜರಿ 49,29,121 ತನ್ನ ಆನ್‌ಲೈನ್ ಮೂಲಕ ಐಟಿಆರ್ ಸಲ್ಲಿಕೆ ಮಾಡಿದ್ದಾರೆ.
ಇದು ಭಾರತೀಯ ಆದಾಯ ತೆರಿಗೆ ಇಲಾಖೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣದ ಸಲ್ಲಿಕೆಯಾಗಿದೆ. ಜೊತೆಗೆ ಇದು ವಿಶ್ವದಾಖಲೆ ಪ್ರಮಾಣದ್ದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಈ ಹಿಂದೆ ಹಲವು ಬಾರಿ ಐಟಿಆರ್ ಸಲ್ಲಿಕೆ ಗಡುವನ್ನು ವಿಸ್ತರಿಸಿದ್ದ ತೆರಿಗೆ ಇಲಾಖೆ, ಇನ್ನು ಯಾವುದೇ ಕಾರಣಕ್ಕೂ ಗಡುವು ವಿಸ್ತರಿಸುವ ಸಾಧ್ಯತೆ ಇಲ್ಲವೇ ಇಲ್ಲ.
ಆ.31ರ ಶನಿವಾರವೇ ಅಂತಿಮ ದಿನ ಎಂದು ಸ್ಪಷ್ಟಪಡಿಸಿತ್ತು. ಅಂತಿಮ ಗಡುವಿನೊಳಗೆ ಐಟಿಆರ್ ಸಲ್ಲಿಕೆ ಮಾಡದೇ ಇದ್ದಲ್ಲಿ ದಂಡ ವಿಧಿಸುವ ಕಾರಣ, ಲಕ್ಷಾಂತರ ಸಂಖ್ಯೆಯಲ್ಲಿ ಜನ ಕಡೆಯ ದಿನ ಮಾಹಿತಿ ಸಲ್ಲಿಕೆ ಮಾಡಿದ್ದಾರೆ.