ಎಂ ಬಿ ಪಾಟೀಲ್ ಮೇಲೆ ಐಟಿ ರೈಡ್?

First Published 21, Mar 2018, 12:18 PM IST
IT Raid on M B Patil
Highlights

ನನ್ನ ಹಾಗೂ ನನ್ನ ಕುಟುಂಬ ಸುತ್ತುಮುತ್ತಲಿರುವ 12 ಜನರ ಫೋನ್ ಟ್ಯಾಪ್  ಆಗಿದೆ.  ನಿನ್ನೆ ಹಾಗೂ ಇವತ್ತು ಬೆಳಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. 

ವಿಜಯಪುರ (ಮಾ.21): ನನ್ನ ಹಾಗೂ ನನ್ನ ಕುಟುಂಬ ಸುತ್ತುಮುತ್ತಲಿರುವ 12 ಜನರ ಫೋನ್ ಟ್ಯಾಪ್  ಆಗಿದೆ.  ನಿನ್ನೆ ಹಾಗೂ ಇವತ್ತು ಬೆಳಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. 

ಕೋಡ್ ಆಫ್ ಕಂಡೆಕ್ಟ್  ಒಳಗೆ ಬರುವ  ನನ್ನ ಮೇಲೆ ದೊಡ್ಡ ಐಟಿ ರೈಡ್ ಆಗುತ್ತೆ.  ನಾಳೆ ಅಥವಾ ಹತ್ತು ದಿನಗಳ ಒಳಗೆ ನನ್ನ ಮೇಲೆ  ಐಟಿ  ದಾಳಿ ಆಗುವ ಸುಳಿವು ಸಿಕ್ಕಿದೆ.  ಬಹಳ ವಿಶ್ವಾಸ ಹಾಗೂ ಅಧಿಕಾರಿಗಳ ಮೂಲಕ ಮಾಹಿತಿ ಸಿಕ್ಕಿದೆ.  ನನ್ನ ಮೇಲೆ  ಐಟಿ ದಾಳಿ ಮಾಡಲು ತಯಾರು ಮಾಡ್ತಾ ಇದ್ದಾರೆ.  ಐಟಿಯನ್ನು ಹೀಗೆ ದುರುಪಯೋಗ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದಿಂದ ಹೋರಾಟ ಮಾಡುತ್ತೇವೆ.  ನನ್ನ ಮೇಲೆ ಐಟಿ ದಾಳಿ ಆಗುತ್ತೆ ಎಂದು ಬಹಳ ಖಚಿತವಾಗಿ ಹೇಳುತ್ತೇನೆ ಎಂದಿದ್ದಾರೆ. 

loader