ದೆಹಲಿಯಿಂದ ಗೌಪ್ಯವಾಗಿ ಬಂದಿದ್ದ ಅಧಿಕಾರಿಗಳು ಬೆಂಗಳೂರಿನ ಮಳವಳ್ಳಿ ಶಿವಣ್ಣ ಮನೆ ಮೇಲೆ ದಾಳಿ ನಡೆಸಿದ್ದು, ಹಲವಾರು ದಾಖಲೆ ಪರಿಶೀಲಿಸಿದ್ದಾರೆ.

ಬೆಂಗಳೂರು(ಜ.09): ವಿಧಾನಸಭಾ ಚುನಾವಣಾ ಹೊಸ್ತಿಲಲ್ಲೇ ಮತ್ತೆ ಸಿಎಂ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸಿಎಂ ಆಪ್ತ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿಯಿಂದ ಗೌಪ್ಯವಾಗಿ ಬಂದಿದ್ದ ಅಧಿಕಾರಿಗಳು ಬೆಂಗಳೂರಿನ ಮಳವಳ್ಳಿ ಶಿವಣ್ಣ ಮನೆ ಮೇಲೆ ದಾಳಿ ನಡೆಸಿದ್ದು, ಹಲವಾರು ದಾಖಲೆ ಪರಿಶೀಲಿಸಿದ್ದಾರೆ.

ಇನ್ನು ಮಳವಳ್ಳಿ ಶಿವಣ್ಣರ ಡಾಲರ್ಸ್ ಕಾಲೋನಿ ನಿವಾಸ, ವೈಷ್ಣವಿ ಅಪಾರ್ಟ್​ಮೆಂಟ್'ನ ಮನೆಗಳ ಮೇಲೆ ಕಳೆದ ಗುರುವಾರ ಹಾಗೂ ಶುಕ್ರವಾರ ದಾಳಿ ನಡೆದಿತ್ತು ಎನ್ನಲಾಗಿದೆ. ಹಲವಾರು ಮಹತ್ವದ ದಾಖಲೆಗಳನ್ನು ವಶಪಡೆಸಿಕೊಂಡಿರುವ ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.