ಬೆಂಗಳೂರು(ನ.11): ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಜ್ಯುವೆಲರಿ ಶಾಪ್'ಗಳು,ಫೈನಾನ್ಸಿಯರ್ ಮನೆಯಲ್ಲಿ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ. ಪ್ರತಿಷ್ಠಿತ ಜ್ಯುವೆಲರಿ ಕಂಪನಿಯ 3 ಶಾಖೆಗಳ ಮೇಲೆ ದಾಳಿ ನಡೆಸಿ 11 ಕೋಟಿ ರೂ. ಮೌಲ್ಯದ ವಸ್ತು, ಯಲಹಂಕದಲ್ಲಿ ಫೈನಾನ್ಸಿಯರ್ ಮನೆಯಲ್ಲಿ 16 ಕೋಟಿ ರೂ. ನಗದು, ವಶಪಡಿಸಿಕೊಂಡಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನ.14 ರಂದು ಭುವನೇಶ್ವರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೇಲೆ ದಾಳಿ ನಡಸಿ ಅಕ್ರಮವಾಗಿ ಸಾಗಿಸುತ್ತಿದ್ದ 1000 ಮುಖಬೆಲೆಯ 50 ಲಕ್ಷ ವಶ ಹಾಗೂ ನ.12 ರಂದು ಹೈದಾರಬಾದ್'ನಿಂದ ಬೆಂಗಳೂರಿಗೆ ಅಕ್ರಮವಾಗಿ 200 ಗ್ರಾಂ ಚಿನ್ನದ ಬಿಸ್ಕಟ್​ನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಚಿನ್ನದ ಬಿಸ್ಕತನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರಿನ 5 ಕೋ ಆಪರೇಟಿವ್ ಬ್ಯಾಂಕ್​ಗಳ ಮೇಲೆ ಐಟಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು 8 ಕೋಟಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಬ್ಯಾಂಕ್'ಗಳು ಹಳೆ ನೋಟು ಪಡೆದು ಅಕ್ರಮವಾಗಿ ಹಣ ನೀಡುತ್ತಿದ್ದವು. ಅತಿ ಹೆಚ್ಚಿನ ಬೆಲೆಗೆ ಚಿನ್ನಾಭರಣ ಮಾರುತ್ತಿದ್ದ ಬೆಂಗಳೂರಿನ ಜ್ಯುವೆಲರಿ ಶಾಪ್ ಬಗ್ಗೆ ಸುವರ್ಣ ನ್ಯೂಸ್ ಎಕ್ಸ್ಲೂಸೀವ್ ವರದಿ ಪ್ರಸಾರ ಮಾಡಿತ್ತು.