ವಿದ್ಯುನ್ಮಾನ ಮತ ಯಂತ್ರಗಳಿಂದ ಹಿಂದಕ್ಕೆ ಸರಿದು ಈ ಮೊದಲಿನಂತೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಕ್ರಮ ಪ್ರತಿಗಾಮಿ ಪರಿಣಾಮಗಳನ್ನು ಬೀರಬಹುದು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಕಾಂಗ್ರೆಸ್ ಹೇಳಿದೆ. ಈ ಮೂಲಕ ಇವಿಎಂ ಬಳಕೆ ಕುರಿತು ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಮೂಡಿದೆ.
ನವದೆಹಲಿ (ಏ.12): ವಿದ್ಯುನ್ಮಾನ ಮತ ಯಂತ್ರಗಳಿಂದ ಹಿಂದಕ್ಕೆ ಸರಿದು ಈ ಮೊದಲಿನಂತೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಕ್ರಮ ಪ್ರತಿಗಾಮಿ ಪರಿಣಾಮಗಳನ್ನು ಬೀರಬಹುದು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಕಾಂಗ್ರೆಸ್ ಹೇಳಿದೆ. ಈ ಮೂಲಕ ಇವಿಎಂ ಬಳಕೆ ಕುರಿತು ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಮೂಡಿದೆ.
ಕಾಂಗ್ರೆಸ್ ಪಕ್ಷದ ನಿಲುವಿಗೆ ವಿರುದ್ಧವಾಗಿ ವೀರಪ್ಪ ಮೊಯ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬ್ಯಾಲೆಟ್ ಪೇಪರ್ ಗೆ ಹಿಂತಿರುಗುವುದು ಪ್ರಗತಿಶೀಲ ಕ್ರಮವಲ್ಲ. ಎಂದು ಮೊಯ್ಲಿ ಹೇಳಿದ್ದಾರೆ.
ಇದು ಮೋಯ್ಲಿಯವರ ವೈಯಕ್ತಿಕ ಅಭಿಪ್ರಾಯ. ಪಕ್ಷದ ಅಭಿಪ್ರಾಯವಲ್ಲ. ಇವಿಎಂ ಮಷಿನ್ ಗಳ ಬಳಕೆ ಬೇಡ. ಇದರಲ್ಲಿ ವಂಚನೆಯಾಗುವ ಸಾಧ್ಯತೆಯಿದೆ. ಹಾಗಾಗಿ ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ.
ಇವಿಎಂಗಳಲ್ಲಿ ಮೋಸವಾಗುವ ವಿಚಾರ ವೀರಪ್ಪ ಮೊಯ್ಲಿ ಅವರಿಗೆ ಗೊತ್ತಿರುವಂತಿಲ್ಲ. ನಾವು ಚುನಾವಣಾ ಆಯೋಗಕ್ಕೆ ಪುರಾವೆಗಳನ್ನು ನೀಡಿದ್ದೇವೆ. ನಮ್ಮ ಆಕ್ಷೇಪವನ್ನು ಅವರು ತಳ್ಳಿ ಹಾಕಿಲ್ಲ. ತನಿಖೆ ನಡೆಸುತ್ತೇವೆಂದು ಹೇಳಿದ್ದಾರೆಂದು ಅಜಾದ್ ಹೇಳಿದ್ದಾರೆ.
