ಪತ್ತೆಯಾದ 2 ಸಾವಿರದ ಹೊಸ ನೋಟಗಳ ಕ್ರಮಸಂಖ್ಯೆ ಆಧರಿಸಿ ತನಿಖೆ ನಡೆಸುತ್ತಿರುವ ಐಟಿ ಅಧಿಕಾರಿಗಳು, ರೇಡ್`ನಲ್ಲಿ ಸಿಕ್ಕ ಆ ಕ್ರಮಸಂಖ್ಯೆಯ ನೋಟುಗಳನ್ನು ಯಾವ ಬ್ಯಾಂಕ್ಗಳಿಗೆ ವಿತರಿಸಲಾಗಿತ್ತು..? ಬ್ಯಾಂಕ್ ವಿವರ, ಕ್ರಮ ಸಂಖ್ಯೆ ಬಗ್ಗೆ ಮಾಹಿತಿ ಬಗ್ಗೆ ವಿವರ ನೀಡುವಂತೆ ಆರ್`ಬಿಐಗೆ ಐಟಿ ಇಲಾಖೆ ನೋಟಿಸ್ ನೀಡಿದೆ.
ಬೆಂಗಳೂರು(ಡಿ.02): ಸಿಎಂ, ಸಚಿವರ ಆಪ್ತರಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನ ಐಟಿ ಅಧಿಕಾರಿಗಳು ತೀವ್ರಗೊಳಿಸಿದ್ಧಾರೆ. ತಮಿಳುನಾಡಿನ ಈರೋಡ್ನಲ್ಲಿರುವ ಬ್ಯಾಂಕ್ ಸೇರಿ 4 ಬ್ಯಾಂಕ್ಗೆ ನೋಟಿಸ್ ಜಾರಿಮಾಡಿದ್ದು, ಕೆಲ ಸಹಕಾರಿ ಬ್ಯಾಂಕ್`ಗಳಿಂದ ಹಣ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ, ಆರ್ಬಿಐ ಅಧಿಕಾರಿಗಳಿಂದ ಮಾಹಿತಿಯನ್ನೂ ಕೇಳಲಾಗಿದೆ.