Asianet Suvarna News Asianet Suvarna News

ಆಪರೇಶನ್ ಕ್ಲೀನ್ ಮನಿ: ಐಟಿ ಇಲಾಖೆ ಪಟ್ಟಿಯಲ್ಲಿ 5.56 ಲಕ್ಷ ಮಂದಿ

ಸರ್ಕಾರ ನೋಟು ಅಮಾನ್ಯ ಕ್ರಮ ಘೋಷಿಸಿದ ಬಳಿಕ ಸಂಶಯಾಸ್ಪದ ಹಣಕಾಸು ವ್ಯವಹಾರ ನಡೆಸಿರುವ 5.56 ಲಕ್ಷ ಮಂದಿಯನ್ನು ಆದಾಯ ತೆರಿಗೆ ಇಲಾಖೆ ಗುರುತಿಸಿದೆ. ಈ ವ್ಯಕ್ತಿಗಳು ಬ್ಯಾಂಕ್’ಗಳಲ್ಲಿ ಡಿಪಾಸಿಟ್ ಮಾಡಿರುವ ಹಣ ಅವರು ಪಾವತಿಸಿರುವ ತೆರಿಗೆಗೆ ಅನುಗುಣವಾಗಿಲ್ಲವೆಂದು ಹೇಳಲಾಗಿದೆ.

IT identifies over 5lakh persons under Operation Clean Money

ನವದೆಹಲಿ: ಸರ್ಕಾರ ನೋಟು ಅಮಾನ್ಯ ಕ್ರಮ ಘೋಷಿಸಿದ ಬಳಿಕ ಸಂಶಯಾಸ್ಪದ ಹಣಕಾಸು ವ್ಯವಹಾರ ನಡೆಸಿರುವ 5.56 ಲಕ್ಷ ಮಂದಿಯನ್ನು ಆದಾಯ ತೆರಿಗೆ ಇಲಾಖೆ ಗುರುತಿಸಿದೆ. ಈ ವ್ಯಕ್ತಿಗಳು ಬ್ಯಾಂಕ್’ಗಳಲ್ಲಿ ಡಿಪಾಸಿಟ್ ಮಾಡಿರುವ ಹಣ ಅವರು ಪಾವತಿಸಿರುವ ತೆರಿಗೆಗೆ ಅನುಗುಣವಾಗಿಲ್ಲವೆಂದು ಹೇಳಲಾಗಿದೆ.

ಜತೆಗೆ, ಇ-ವೆರಿಫಿಕೇಶನ್ ಸಂದರ್ಭದಲ್ಲಿ ತಮ್ಮ ಎಲ್ಲಾ ಬ್ಯಾಂಕು ಖಾತೆಗಳ ವಿವರ ಬಹಿರಂಗಪಡಿಸದೇ ಇರುವ 1.04 ಲಕ್ಷ ಮಂದಿಯನ್ನು ಕೂಡಾ ಗುರುತಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಮೊದಲ ಹಂತದಲ್ಲಿ, ಭಾರೀ ಪ್ರಮಾಣದ ನಗದು ಡಿಪಾಸಿಟ್ ಮಾಡಿದ 17.92 ಲಕ್ಷ ಮಂದಿಯನ್ನು ಇ-ವೆರಿಫಿಕೇಶನ್’ಗಾಗಿ ಗುರುತಿಸಲಾಗಿತ್ತು. ಅದರ ಪೈಕಿ ಸುಮಾರು 9.72 ಲಕ್ಷ ಮಂದಿ ಆನ್’ಲೈನ್ ಮೂಲಕ ಪ್ರತಿಕ್ರಿಯಿಸಿದ್ದರು ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.

ಗುರುತಿಸಲಾದ ವ್ಯಕ್ತಿ./ ಮಾಹಿತಿದಾರರ ವಿವರವನ್ನು http://incometaxindiaefiling.gov.in ಪ್ರಕಟಿಸಲಾಗಿದೆ. ಆ  ವ್ಯಕ್ತಿಗಳು  ಆದಾಯ ತೆರಿಗೆ ಇಲಾಖೆಗೆ ಮುಖತ: ಭೇಟಿಯಾಗುವ ಅವಶ್ಯಕತೆಯಿಲ್ಲ, ಆನ್’ಲೈನ್ ಮೂಲಕ ಪ್ರತಿಕ್ರಿಯಿಸಬಹುದಾಗಿದೆ. ಜತೆಗೆ ಇ-ಮೈಲ್ ಹಾಗೂ ಎಸ್ಎಂಎಸ್ ಮೂಲಕ ಅವರಿಗೆ ಈ ಬಗ್ಗೆ ಮಾಹಿತಿಯನ್ನು ರವಾನಿಸಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios