ದೀಪಾವಳಿ ಸಂದರ್ಭದಲ್ಲಿ ತೆರಿಗೆದಾರರ ವೆಚ್ಚದ ಕುರಿತು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ನಿಗಾ ಇಡಲು ತೆರಿಗೆ ಇಲಾಖೆ ಉದ್ದೇಶಿಸಿದೆ. ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿರುವಾಗಲೇ, ತೆರಿಗೆ ಅಧಿಕಾರಿಗಳು ಅದನ್ನು ಮತ್ತೊಂದು ಸ್ತರಕ್ಕೆ ಒಯ್ದಿದ್ದಾರೆ.ತೆರಿಗೆದಾರರ ವೆಚ್ಚದ ಮೇಲೆ ಕಣ್ಣಿಡಲು ‘ಪ್ರಾಜೆಕ್ಟ್ ಇನ್‌ಸೈಟ್’ ಎಂಬ ಆಂದೋಲನ ಆರಂಭಿಸಿದ್ದಾರೆ.

ನವದೆಹಲಿ(ಅ.15): ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರಿನಂತಹ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿ, ಅದರ ಮುಂದೆ ಫೋಟೋ ತೆಗೆದುಕೊಂಡು ಫೇಸ್‌'ಬುಕ್‌'ಗೆ ಹಾಕುವ ಧಾವಂತದಲ್ಲಿದ್ದೀರಾ? ಹಾಗಿದ್ದರೆ, ಸ್ವಲ್ಪ ತಾಳಿ. ಆದಾಯ ಹಾಗೂ ವೆಚ್ಚ ಸರಿ ಹೊಂದದೇ ಇದ್ದ ಪಕ್ಷದಲ್ಲಿ ಲೈಕ್‌'ಗಳ ಬದಲಾಗಿ ತೆರಿಗೆ ಅಧಿಕಾರಿಗಳು ಬರಬಹುದು!

ದೀಪಾವಳಿ ಸಂದರ್ಭದಲ್ಲಿ ತೆರಿಗೆದಾರರ ವೆಚ್ಚದ ಕುರಿತು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ನಿಗಾ ಇಡಲು ತೆರಿಗೆ ಇಲಾಖೆ ಉದ್ದೇಶಿಸಿದೆ. ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿರುವಾಗಲೇ, ತೆರಿಗೆ ಅಧಿಕಾರಿಗಳು ಅದನ್ನು ಮತ್ತೊಂದು ಸ್ತರಕ್ಕೆ ಒಯ್ದಿದ್ದಾರೆ.ತೆರಿಗೆದಾರರ ವೆಚ್ಚದ ಮೇಲೆ ಕಣ್ಣಿಡಲು ‘ಪ್ರಾಜೆಕ್ಟ್ ಇನ್‌ಸೈಟ್’ ಎಂಬ ಆಂದೋಲನ ಆರಂಭಿಸಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿರುವ ಮಾಹಿತಿ ಆಧರಿಸಿ ತೆರಿಗೆದಾರ ಹಾಗೂ ಆತನ ಕುಟುಂಬ ಮಾಡಿರುವ ವೆಚ್ಚ ಮತ್ತು ಇಲಾಖೆಗೆ ಘೋಷಣೆ ಮಾಡಿರುವ ಆದಾಯವನ್ನು ಪರಿಶೀಲಿಸಲಿದೆ. ಹೀಗಾಗಿ ಹಬ್ಬದ ದಿನಗಳಲ್ಲಿ ದುಬಾರಿ ವಸ್ತು ಖರೀದಿ ಅಥವಾ ವಿದೇಶ ಪ್ರವಾಸ ಮಾಡಿ ಅದರ ಕುರಿತು ಆನ್'ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಿದ್ದರೆ, ಅದರ ಮಾಹಿತಿ ತಕ್ಷಣವೇ ತನ್ನ ಸೇರುವ ವ್ಯವಸ್ಥೆಯನ್ನು ಆದಾಯ ತೆರಿಗೆ ಇಲಾಖೆ ಮಾಡಿಕೊಂಡಿದೆ. ಅನುಮಾನಾಸ್ಪದ ವ್ಯಕ್ತಿಗಳ ಕುರಿತ ಇಂಥ ಮಾಹಿತಿ ಕಲೆ ಹಾಕುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಅದನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಿದ್ದಾರೆ.