Asianet Suvarna News Asianet Suvarna News

ಕಾಳಧನ: ಬ್ರಹ್ಮಾಸ್ತ್ರ ಪ್ರಯೋಗಿಸಲು ಆದಾಯ ತೆರಿಗೆ ಇಲಾಖೆ ಸಜ್ಜು

ನೋಟು ನಿಷೇಧದ ಬಳಿಕ ದೇಶಾದ್ಯಂತ ಠೇವಣೆಯಾಗಿರುವ 7.32 ಲಕ್ಷ ಕೋಟಿ ಹಣದ ಮೂಲವನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಎಲ್ಲ ಬ್ಯಾಂಕ್’ಗಳಿಗೆ  ಈಗಾಗಲೇ ಸೂಚನೆ ನೀಡಿರುವ ಐಟಿ ಇಲಾಖೆಯು ಜನವರಿ 31ರ ಒಳಗೆ ತಮ್ಮ ಬ್ಯಾಂಕಿನಲ್ಲಾದ ವಹಿವಾಟಿನ ವರದಿಯನ್ನು ನೀಡುವಂತೆ ಖಡಕ್ ಸೂಚನೆ ನೀಡಿದೆ.

IT Dept Issues Notices to Bank Over Huge Deposits

ನವದೆಹಲಿ (ಜ.20): ನೋಟು ನಿಷೇಧ ಬಳಿಕ ಕಾಳಧನಿಕರ ಬೆನ್ನತ್ತಿದ್ದ ಆದಾಯ ತೆರಿಗೆ ಅಧಿಕಾರಿಗಳು, ಈಗ ತಮ್ಮ ಚಿತ್ತವನ್ನು ಬ್ಯಾಂಕ್’ನಲ್ಲಿ ಅಧಿಕ ಠೇವಣಿ ಮಾಡಿರುವ ಗ್ರಾಹಕರು ಹಾಗೂ ಅವರೊಂದಿಗೆ ಕೈಜೋಡಿಸಿರುವ ಬ್ಯಾಂಕ್’ಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಜ್ಜಾಗಿದೆ.

ನೋಟು ನಿಷೇಧದ ಬಳಿಕ ದೇಶಾದ್ಯಂತ ಠೇವಣೆಯಾಗಿರುವ 7.32 ಲಕ್ಷ ಕೋಟಿ ಹಣದ ಮೂಲವನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಎಲ್ಲ ಬ್ಯಾಂಕ್’ಗಳಿಗೆ  ಈಗಾಗಲೇ ಸೂಚನೆ ನೀಡಿರುವ ಐಟಿ ಇಲಾಖೆಯು ಜನವರಿ 31ರ ಒಳಗೆ ತಮ್ಮ ಬ್ಯಾಂಕಿನಲ್ಲಾದ ವಹಿವಾಟಿನ ವರದಿಯನ್ನು ನೀಡುವಂತೆ ಖಡಕ್ ಸೂಚನೆ ನೀಡಿದೆ.

ಈ ನಿಯಮವೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್’ಗಳು, ಖಾಸಗಿ ಬ್ಯಾಂಕ್’ಗಳು ಮತ್ತು ಕೋ ಆಪರೇಟೀವ್ ಬ್ಯಾಂಕ್’ಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಇದರ ಹೊರತಾಗಿ ದಾಳಿಯ ನಿರ್ಣಯ ಕೈಗೊಂಡ ಕಾರಣವನ್ನು ವಿವರಿಸಿದ್ದು, ದೇಶಾದ್ಯಂತ 1.34ಲಕ್ಷ ಖಾತೆಗಳಲ್ಲಿ 7.32 ಲಕ್ಷ ಕೋಟಿ ಠೇವಣಿಯಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಬಳಕೆಯಾಗದ ಖಾತೆಗಳಲ್ಲಿ ಹಾಗೂ ಜನ್ ಧನ್ ಖಾತೆಗಳಲ್ಲಿ 90 ಸಾವಿರ ಕೋಟಿ ಠೇವಣೆಯಾಗಿದ್ದು ಕರ್ನಾಟಕದಲ್ಲೇ 35 ಕೋಟಿ ಜನ್ ಧನ್ ಖಾತೆಯಲ್ಲಿ ಜಮೆಯಾಗಿದೆ.

ಇದರ ಹೊರತಾಗಿ ಬಳಕೆಯಾಗದ ಖಾತೆಗಳಲ್ಲಿ 17 ಸಾವಿರ ಕೋಟಿ ಠೇವಣಿಯಾಗಿದೆ. ಇದಲ್ಲದೆ ಬೆಂಗಳೂರಿನಲ್ಲಿ 1 ಕೋಟಿಗೂ ಅಧಿಕ ವಹಿವಾಟು ನಡೆಸಿರುವ 2300 ಖಾತೆಗಳ ಬಗ್ಗೆ ತನಿಖೆ ನಡೆಸುವುದಾಗಿಯೂ ತಿಳಿಸಿದ್ದಾರೆ. ಮತ್ತು ಹಲವು ವರ್ಷಗಳಿಂದ ಯಾವುದೇ ದಾಖಲೆಗಳಲನ್ನು ಐಟಿಗೆ ನೀಡದಿರುವ 260 ಕೋ ಆಪರೇಟಿವ್ ಬ್ಯಾಂಕ್’ಗಳು ಹಾಗೂ 60 ಬ್ಯಾಂಕ್’ಗಳನ್ನು ಗುರುತಿಸಿ ನೋಟಿಸ್ ಜಾರಿಗೊಳಿಸಿದೆ.  

Latest Videos
Follow Us:
Download App:
  • android
  • ios