Asianet Suvarna News Asianet Suvarna News

ವ್ಯಕ್ತಿಗಳು ಆಯ್ತು, ಈಗ ಕಂಪೆನಿಗಳ ನಗದು ಡೀಲ್ ಬಗ್ಗೆ ಐಟಿ ಕಣ್ಣು

ಅಪನಗದೀಕರಣದ ಬಳಿಕ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಿನಲ್ಲಿ ಏಕಾಏಕಿ ಹಣದ ವಹಿವಾಟು ಏರಿಕೆಯಾದ ಕಂಪನಿಗಳ ಮೇಲೆ ತೆರಿಗೆ ಅಧಿಕಾರಿಗಳು ನಿಗಾ ಇಟ್ಟಿದೆ.
ಒಂದು ವೇಳೆ ಯಾವುದೇ ಕಂಪನಿಯ ಆದಾಯ ಅಸಹಜವಾಗಿ ಏರಿಕೆಯಾಗಿದ್ದರೆ, ತೆರಿಗೆ ಇಲಾಖೆ ಅಂಥ ಕಂಪನಿಯ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಿದೆ. ವ್ಯಾಪಾರಿ ಲಾಭವನ್ನು ತೋರಿಸುವಾಗ ಕಪ್ಪುಹಣವನ್ನು ಮರೆಮಾಚಲಾಗಿದೆಯೇ ಎನ್ನುವುದನ್ನು ಪತ್ತೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

IT Departments Eye Is On Companies

ನವದೆಹಲಿ(ಫೆ.24): ಅಪನಗದೀಕರಣದ ಬಳಿಕ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಿನಲ್ಲಿ ಏಕಾಏಕಿ ಹಣದ ವಹಿವಾಟು ಏರಿಕೆಯಾದ ಕಂಪನಿಗಳ ಮೇಲೆ ತೆರಿಗೆ ಅಧಿಕಾರಿಗಳು ನಿಗಾ ಇಟ್ಟಿದೆ.
ಒಂದು ವೇಳೆ ಯಾವುದೇ ಕಂಪನಿಯ ಆದಾಯ ಅಸಹಜವಾಗಿ ಏರಿಕೆಯಾಗಿದ್ದರೆ, ತೆರಿಗೆ ಇಲಾಖೆ ಅಂಥ ಕಂಪನಿಯ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಿದೆ. ವ್ಯಾಪಾರಿ ಲಾಭವನ್ನು ತೋರಿಸುವಾಗ ಕಪ್ಪುಹಣವನ್ನು ಮರೆಮಾಚಲಾಗಿದೆಯೇ ಎನ್ನುವುದನ್ನು ಪತ್ತೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ರದ್ದಾದ ನೋಟುಗಳ ಮೂಲಕ ಕಾನೂನು ಸಮ್ಮತ ತೆರಿಗೆ ಪಾವತಿಗೆ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ, ಹಳೆಯ ನೋಟುಗಳನ್ನು ಬಳಸಿ ವಾಣಿಜ್ಯ ಕಂಪನಿಗಳು ಅಧಿಕ ತೆರಿಗೆಗಳನ್ನು ಪಾವತಿಸಿರುವ ನಿರ್ದಶನಗಳಿವೆ. ಕಂಪನಿಗಳು ತೋರಿಸಿರುವ ನಗದು ವಹಿವಾಟು, ಸಮಂಜಸ ಮಾರ್ಗದಿಂದ ಬಂದಿದ್ದೇ ಅಥವಾ ಕಪ್ಪು ಹಣವನ್ನು ತೊಡಗಿಸಲಾಗಿದೆ ಎಂಬುದನ್ನು ಪರಿಶೀಲನೆ ನಡೆಸಲಾಗುವುದು. ಮಾಸಿಕವಾಗಿ ಕಂಪನಿ ಆದಾಯ ಮತ್ತು ವೆಚ್ಚ, ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳನ್ನು ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

Follow Us:
Download App:
  • android
  • ios