Asianet Suvarna News Asianet Suvarna News

ಮತ್ತೊಂದು ಸಾಧನೆಗೆ ಸಜ್ಜಾಗಿದೆ ಇಸ್ರೋ: ಏಕಕಾಲಕ್ಕೆ 2 ಕಕ್ಷೆಗೆ 8 ಉಪಗ್ರಹಗಳ ಉಡಾವಣೆ

ISROs Rocket Takes Off Today With 8 Satellites And a Big Challenge

ಬೆಂಗಳೂರು(ಸೆ.26): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೊಸ ಸಾಧನೆ ಮಾಡುತ್ತಿದೆ. ಒಂದೇ ರಾಕೆಟ್​ ಮೂಲಕ ಎಂಟು ಉಪಗ್ರಹಗಳನ್ನು ಇಸ್ರೋ ಕಕ್ಷೆಗೆ ಸೇರಿಸಿಸಲಿದೆ. ಈ ಕ್ಷಣಕ್ಕಾಗಿ ಈಗಾಗಲೇ ಇಸ್ರೋ ವಿಜ್ಞಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ.

ಈಗಾಗಲೇ ಹಲವು ಉಪಗ್ರಹಗಳನ್ನು ಉಡಾವಣೆ ಮೂಲಕ ವಿಶ್ವದ ಪ್ರಶಂಸೆಗೆ ಪಾತ್ರವಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ , ಇದೀಗ ಮತ್ತೊಂದು ಮೈಲುಗಲ್ಲಿಗೆ ಸಿದ್ಧತೆ  ನಡೆಸಿದೆ. ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡಲು ಸಿದ್ಥತೆ ನಡೆಸಿದೆ. ಇಂದು ಬೆಳಗ್ಗೆ 9.12ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ಉಡಾವಣೆಗೊಳ್ಳಲಿದೆ.

8 ಉಪಗ್ರಗಳ ಹೊತ್ತೊಯ್ಯಲಿದೆ PSLV-C35

8 ಉಪಗ್ರಹಗಳ ಪೈಕಿ ಮೂರು  ಉಪಗ್ರಹಗಳು ಭಾರತದ್ದಾಗಿದ್ದು, ಉಳಿದ ಐದು ವಿದೇಶಿ ಉಪಗ್ರಹಗಳು. ಇದಕ್ಕಾಗಿ ಇಸ್ರೋದ ಯಶಸ್ವೀ ಉಡಾವಣಾ ವಾಹಕ ಪಿಎಸ್​ಎಲ್​ವಿ ರಾಕೆಟ್ ರೆಡಿಯಾಗಿದೆ. ಈ  ಉಡಾವಣೆಯು ಇಸ್ರೋದ ಸುದೀರ್ಘಾವಧಿಯ ಕಾರ್ಯವಾಗಿದ್ದು, ಸುಮಾರು 2 ಗಂಟೆ, 15 ನಿಮಿಷಗಳ ಕಾಲ ತಗುಲಲಿದೆ.  320 ಟನ್ ತೂಕ ಹೊಂದಿರುವ ಈ ರಾಕೆಟ್​ 8 ಉಪಗ್ರಹಗಳನ್ನು ಬೇರೆ ಬೇರೆ ಕಕ್ಷೆಗೆ ಸೇರಿಸೋದು ಸದ್ಯ ಇಸ್ರೋ ಮುಂದಿರುವ ಕ್ಲಿಷ್ಟಕರ ಸವಾಲು. ಯಾಕಂದ್ರೆ ಬಾಹ್ಯಾಕಾಶದಲ್ಲಿ ರಾಕೆಟ್​ ಎಂಜಿನ್‌ ಅನ್ನು ಆಫ್ ಮಾಡಿ ಮತ್ತೆ ಎಂಜಿನ್‌ ಸ್ಟಾರ್ಟ್‌ ಮಾಡಬೇಕಿರುತ್ತದೆ. ಇದು ಇಸ್ರೋ ಮುಂದಿರುವ ಅತೀ ದೊಡ್ಡ ಸವಾಲು.

ಉಪಗ್ರಹಗಳ ಪಟ್ಟಿಯಲ್ಲಿ ಬೆಂಗಳೂರಿನ ಪಿಇಎಸ್ ಇನ್ಸ್ಟ್ಟಿಟ್ಯೂಟ್​ ಆಫ್ ಟೆಕ್ನಾಲಜಿಯ 250 ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಪೈಸ್ಯಾಟ್ ಹೆಸರಿನ ಉಪಗ್ರಹವೂ ಒಂದಾಗಿದೆ. ವಿದ್ಯಾರ್ಥಿಗಳ 5 ವರ್ಷಗಳ ಶ್ರಮ ನಾಳೆ ಫಲ ಕೊಡುತ್ತಿದೆ.

ಒಟ್ಟಾರೆ ಬಾಹ್ಯಾಕಾಶದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ  ಹೊಸ ದಾಖಲೆ ಬರೆಯಲು ಕ್ಷಣಗಣನೆ ಆರಂಭವಾಗಿದೆ.

 

Latest Videos
Follow Us:
Download App:
  • android
  • ios