ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಂಗಳಯಾನದ ಬಳಿಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಒಂದೇ ರಾಕೆಟ್`ನಲ್ಲಿ 103 ಉಪಗ್ರಹಗಳ ಉಡಾವಣೆಯ ಬೃಹತ್ ಯೋಜನೆಗೆ ಸಜ್ಜಾಗಿದೆ. ರಷ್ಯಾ ಒಂದೇ ರಾಕೆಟ್`ನಲ್ಲಿ 37 ಉಪಗ್ರಹಗಳನ್ನ ಕಳುಹಿಸಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಇದೀಗ, ಇಸ್ರೋ ಹೊಸ ದಾಖಲೆ ಮೂಲಕ ಮತ್ತೊಮ್ಮೆ ವಿಶ್ವದ ಗಮನ ಸೆಳೆಯಲು ಸಿದ್ಧವಾಗಿದೆ.
ತಿರುವನಂತಪುರ(ಜ.23): ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಂಗಳಯಾನದ ಬಳಿಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಒಂದೇ ರಾಕೆಟ್`ನಲ್ಲಿ 103 ಉಪಗ್ರಹಗಳ ಉಡಾವಣೆಯ ಬೃಹತ್ ಯೋ ಸಜ್ಜಾಗಿದೆ. ರಷ್ಯಾ ಒಂದೇ ರಾಕೆಟ್`ನಲ್ಲಿ 37 ಉಪಗ್ರಹಗಳನ್ನ ಕಳುಹಿಸಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಇದೀಗ, ಇಸ್ರೋ ಹೊಸ ದಾಖಲೆ ಮೂಲಕ ಮತ್ತೊಮ್ಮೆ ವಿಶ್ವದ ಗಮನ ಸೆಳೆಯಲು ಸಿದ್ಧವಾಗಿದೆ.
`ಉಡಾವಣಾ ವಾಹನದಿಂದ ಉಪಗ್ರಹಗಳು ಭಿನ್ನ ದಿಕ್ಕುಗಳಲ್ಲಿ ಬೇರ್ಪಡುತ್ತವೆ. ಉಪಗ್ರಹಗಳು ಬೇರ್ಪಡುವ ಸಮಯದಲ್ಲಿ ವ್ಯತ್ಯಾಸವಿರುವುದರಿಂದ ಡಿಕ್ಕಿಯಾಗುವ ಸಾಧ್ಯತೆ ಇಲ್ಲ' ಎಂದು ತಿರುವನಂತಪರುರದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್`ನ ನಿರ್ದೇಶಕ ಡಾ. ಕೆ. ಸಿವಂ ತಿಳಿಸಿದ್ದಾರೆ.
