ಬೆಂಗಳೂರು[ನ.29]: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಭಾರತದ ಭೂ ವೀಕ್ಷಣಾ ಉಪಗ್ರಹವೊಂದರ ಜೊತೆ 8 ದೇಶಗಳ 30 ಸಣ್ಣ ಉಪಗ್ರಗಳನ್ನು ಇಂದು ಉಡಾವಣೆ ಮಾಡಲಿದೆ. 

ಈ ಮಹತ್ವಾಕಾಂಕ್ಷಿ ಉಡಾವಣೆಗೆ ಬುಧವಾರ ಮುಂಜಾನೆ 5.58 ನಿಮಿಷದಿಂದ ಕೌಂಟ್‌ಡೌನ್‌ ಆರಂಭವಾಗಲಿದ್ದು, ಗುರುವಾರ ಮುಂಜಾನೆ 9.58 ನಿಮಿಷಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ನೆಲೆಯಿಂದ ಉಪಗ್ರಹ ಉಡಾವಣೆಗೊಳ್ಳಲಿದೆ. 

ಪಿಎಸ್‌ಎಲ್‌ವಿ- ಸಿಎ ಉಡಾವಣಾ ವಾಹಕವು 380 ಕೆ.ಜಿ. ತೂಕದ ಎಚ್‌ವೈಎಸ್‌ಐಎಸ್‌ ಉಪಗ್ರಹ ಹಾಗೂ 261.5 ಕೆ.ಜಿ. ತೂಕದ ಇತರ ದೇಶಗಳ 30 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.