ಬಾಹ್ಯಾಕಾಶಕ್ಕೆ ಮಾನವ ಇಸ್ರೋ ಪರೀಕ್ಷೆ ಯಶಸ್ವಿಯಶಸ್ವಿ ಕ್ಯಾಪ್ಸೂಲ್ ಪರೀಕ್ಷೆ ನಡೆಸಿದ ಇಸ್ರೋಶ್ರೀಹರಿಕೋಟಾದಲ್ಲಿ ನಡೆದ ಯಶಸ್ವಿ ಪರೀಕ್ಷೆ
ನವದೆಹಲಿ(ಜು.5): ಭವಿಷ್ಯದಲ್ಲಿ ಮಾನವರನ್ನು ಬಾಹ್ಯಕಾಶಕ್ಕೆ ಕಳುಹಿಸುವ ಯೋಜನೆಗೆ ಇಸ್ರೋ ಮುನ್ನುಡಿ ಬರೆದಿದೆ. ಬಾಹ್ಯಾಕಾಶ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮುಂದಾಗಿರುವ ಇಸ್ರೋ, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಮಾನವರನ್ನು ಹೊತ್ತ ಕ್ಯಾಪ್ಸೂಲ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ.
ತುರ್ತು ಪರಿಸ್ಥಿತಿಯಲ್ಲಿ ತುರ್ತು ನಿರ್ಗಮನ ಮಾಡುವುದು ಹೇಗೆ ಎಂಬ ಪರೀಕ್ಷೆಯನ್ನು ತನ್ನ ಶ್ರೀಹರಿಕೋಟಾ ಕೇಂದ್ರದಲ್ಲಿ ಇಸ್ರೋ ಯಶಸ್ವಿಯಾಗಿ ಪೂರೈಸಿದೆ. ಈ ಕುರಿತು ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ಕೆ. ಶಿವನ್, “ಸಿಬ್ಬಂದಿ ಹೊತ್ತೊಯ್ಯಬಲ್ಲ ಕ್ಯಾಪ್ಸೂಲ್‌ಅನ್ನು ರಾಕೆಟ್ ಇಂಜಿನ್‌ಗೆ ಜೋಡಣೆ ಮಾಡಿ ಉಡಾವಣೆ ಮಾಡಲಾಯಿತು. ಕೆಲವೇ ಕ್ಷಣಗಳಲ್ಲಿ ರಾಕೆಟ್‌ನಿಂದ ಬೇರ್ಪಟ್ಟ ಕ್ಯಾಪ್ಸೂಲ್‌ಅನ್ನು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಲಾಯಿತು. ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ” ಎಂದು ತಿಳಿಸಿದ್ದಾರೆ.
259 ಸೆಕೆಂಡ್‌ಗಳ ಕಾಲ ನಡೆದ ಪರೀಕ್ಷೆಯ ಯಶಸ್ವಿನೊಂದಿಗೆ ಮುಂದಿನ ದಿನಗಳಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಹಾದಿ ಇನ್ನಷ್ಟು ಸುಗಮವಾಗಿದೆ. ಮಿಶನ್ ಸಂದರ್ಭ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಕ್ಯಾಪ್ಸೂಲ್ ಒಳಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ನಿಟ್ಟಿನಲ್ಲಿ ನಡೆಸಿದ ಮೊದಲ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ ಎಂದು ಶಿವನ್ ಇದೇ ಸಂದರ್ಭ ತಿಳಿಸಿದ್ದಾರೆ.
