Asianet Suvarna News Asianet Suvarna News

ಸುಳ್ಳೇ ಸುಳ್ಳು..! ಇಸ್ರೋ ಅಧ್ಯಕ್ಷರ ಹೆಸರಿನಲ್ಲಿ ನಕಲಿ ಖಾತೆ..!

ಇಸ್ರೋ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರಯಾನ-2 ಕಡೆ ಕ್ಷಣದಲ್ಲಿ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ ಇಸ್ರೋ ಅಧ್ಯಕ್ಷ ಡಾ. ಕೆ. ಸಿವನ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳು ತೆರೆಯಲಾಗಿದೆ. ಈ ಕುರಿತಂತೆ ಇಸ್ರೋ ಇದೀಗ ಸ್ಪಷ್ಟನೆ ನೀಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ISRO clarifies its chief doesn't have any Social media Account
Author
Bengaluru, First Published Sep 9, 2019, 4:04 PM IST

ಬೆಂಗಳೂರು[ಸೆ.09]: ಇಡೀ ದೇಶವೇ ಚಂದ್ರಯಾನ್ 2 ಯಶಸ್ಸನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಳ್ಳುವುದರ ಮೂಲಕ ಇಸ್ರೋ ಮಹತ್ವಾಕಾಂಕ್ಷೆ ಯೋಜನೆ ಅಲ್ಪ ಹಿನ್ನಡೆ ಅನುಭವಿಸಿತು.

ಚಂದ್ರಯಾನ 2: ಕಳೆದುಕೊಂಡಿದ್ದು ಅತ್ಯಲ್ಪ, ದೊರೆತಿದ್ದು ಅತ್ಯಧಿಕ!

ಸೆಪ್ಟೆಂಬರ್ 07ರಂದು ನಿಗದಿಯಂತೆ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧೃವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿತ್ತು. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ಮೂಲೆಯಿಂದ ಆಯ್ದ 60ಕ್ಕೂ ಅಧಿಕ ವಿಧ್ಯಾರ್ಥಿಗಳನ್ನು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಆಹ್ವಾನಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡಿತ್ತು. ಮರುದಿನ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಎದುರು ಇಸ್ರೋ ಅಧ್ಯಕ್ಷ ಕೆ. ಸಿವನ್ ಬಿಕ್ಕಿಬಿಕ್ಕಿ ಅತ್ತಿದ್ದರು. ಆಗ ಮೋದಿ ತಬ್ಬಿಕೊಂಡು ಸಂತೈಸಿದ ಕ್ಷಣ ಭಾರತೀಯರ ಹೃದಯ ಗೆದ್ದಿತ್ತು. 

Video: ಮೋದಿ ತಬ್ಬಿ ಕಣ್ಣೀರು ಹಾಕಿದ ಇಸ್ರೋ ಅಧ್ಯಕ್ಷ, ಬೆನ್ನು ತಟ್ಟಿ ಧೈರ್ಯ ತುಂಬಿದ ಪಿಎಂ!

ಇದರ ಬೆನ್ನಲ್ಲೇ ಕೆಲವು ’ಪ್ರಾಯಶಃ ನಿರುದ್ಯೋಗಿ ಫೇಕುಗಳು’ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಇಸ್ರೋ ಅಧ್ಯಕ್ಷ ಕೆ. ಸಿವನ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರದಿದ್ದಾರೆ. ಅಕೌಂಟ್ ತೆರೆದ ಮೊದಲ ದಿನ 4,000 ಫಾಲೋವರ್ಸ್ ಹೊಂದಿತ್ತು. ಆದರೆ ಮರುದಿನ ಅಂದರೆ ಸೆಪ್ಟೆಂಬರ್ 8ರ ವೇಳೆಗೆ 51,000 ಫಾಲೋವರ್ಸ್ ದಾಟಿತ್ತು. ಹೀಗೆ ಹತ್ತು ಹಲವು ಖಾತೆಗಳು ಕೆ. ಸಿವನ್ ಹೆಸರಿನಲ್ಲಿ ತೆರೆಯಲಾಗಿದೆ. 

ಸತ್ಯ ಏನು.?

ಇದೀಗ ಇಸ್ರೋ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೆ. ಸಿವನ್ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಆದರೆ ನಿಜವಾಗಿಯೂ ಡಾ. ಕೆ. ಸಿವನ್ ಯಾವುದೇ ವೈಯುಕ್ತಿಕ ಖಾತೆ ಹೊಂದಿಲ್ಲ ಎಂದು ತಿಳಿಸಿದೆ. 
 

Follow Us:
Download App:
  • android
  • ios