ಜಾಗತಿಕ ತಾಪಮಾನ ಹೆಚ್ಚಳ ಪರಿಣಾಮ ‘ನಾಸಾ’ ವರದಿ ನೀಡಿದೆ. ರಾಜ್ಯದ ಮಂಗಳೂರು ಸಮುದ್ರ ತೀರದ ಸುತ್ತಲ ಪ್ರದೇಶಗಳಲ್ಲಿ ಸಮುದ್ರದ ನೀರಿನ ಮಟ್ಟ ಹೆಚ್ಚಳವಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರು, ಹವಾಮಾನ ಬದಲಾವಣೆ ಕುರಿತು ಇನ್ನೂ ವಿಸ್ತೃತವಾಗಿ ಸಂಶೋಧನೆ ಮಾಡಿಲ್ಲ. ಸಮುದ್ರಮಟ್ಟ ಹಾಗೂ ಮುಳುಗಡೆ ಪ್ರದೇಶ ಕುರಿತು ಇನ್ನಷ್ಟೇ ವರದಿ ಮಾಡಬೇಕಿದೆ ಎಂದು ತಿಳಿಸಿದರು.

ಬೆಂಗಳೂರು: ಜಾಗತಿಕ ತಾಪಮಾನ ಹೆಚ್ಚಳ ಪರಿಣಾಮ ‘ನಾಸಾ’ ವರದಿ ನೀಡಿದೆ. ರಾಜ್ಯದ ಮಂಗಳೂರು ಸಮುದ್ರ ತೀರದ ಸುತ್ತಲ ಪ್ರದೇಶಗಳಲ್ಲಿ ಸಮುದ್ರದ ನೀರಿನ ಮಟ್ಟ ಹೆಚ್ಚಳವಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರು, ಹವಾಮಾನ ಬದಲಾವಣೆ ಕುರಿತು ಇನ್ನೂ ವಿಸ್ತೃತವಾಗಿ ಸಂಶೋಧನೆ ಮಾಡಿಲ್ಲ. ಸಮುದ್ರಮಟ್ಟ ಹಾಗೂ ಮುಳುಗಡೆ ಪ್ರದೇಶ ಕುರಿತು ಇನ್ನಷ್ಟೇ ವರದಿ ಮಾಡಬೇಕಿದೆ ಎಂದು ತಿಳಿಸಿದರು.

Add Asianetnews Kannada as a Preferred SourcegooglePreferred

ನೀರ್ಗಲ್ಲು ಕರಗಿ ಸಮುದ್ರ ಮಟ್ಟ ಏರುವಿಕೆಯಿಂದ ಉಂಟಾಗುವ ಅಪಾಯದ ಸಂಭಾವ್ಯತೆಯಲ್ಲಿ ಮಂಗಳೂರು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. 100 ವರ್ಷಗಳಲ್ಲಿ ಮಂಗಳೂರಿನ ಕಡಲ ಮಟ್ಟ 16 ಸೆಂ.ಮೀ. ಏರಬಹುದೆಂದು ವರದಿಯಾಗಿದೆ. ನೀರ್ಗಲ್ಲು ಕರಗುವಿಕೆಯಿಂದ ಸಮುದ್ರದ ನೀರಿನ ಮಟ್ಟದಲ್ಲಿ ಉಂಟಾಗುವ ಏರಿಕೆ ಪರಿಣಾಮ ಪ್ರವಾಹ ಭೀತಿ ಎದುರಿಸಲಿರುವ ನಗರಗಳ ಪೈಕಿ ಕರ್ನಾಟಕದ ಮಂಗಳೂರು ವಿಶ್ವದಲ್ಲೇ ಮುಂಚೂಣಿಯಲ್ಲಿದೆ ಎಂದು ನಾಸಾ ಬಿಡುಗಡೆ ಮಾಡಿರುವ ವರದಿಯೊಂದು ತಿಳಿಸಿದೆ.

ಇಂಥದ್ದೊಂದು ಅಪಾಯಕಾರಿ ಪರಿಸ್ಥಿತಿಯಲ್ಲಿ ಸಮುದ್ರ ತಟದಲ್ಲಿರುವ ಅಮೆರಿಕದ ನ್ಯೂಯಾರ್ಕ್, ಭಾರತದ ವಾಣಿಜ್ಯ ನಗರಿ ಮುಂಬೈಗಿಂತಲೂ ಮಂಗಳೂರು ಹೆಚ್ಚಿನ ಅಪಾಯದಲ್ಲಿದೆ ಎಂದು ವರದಿ ಹೇಳಿದೆ. ಮುಂದಿನ 100 ವರ್ಷಗಳಲ್ಲಿ ನೀರ್ಗಲ್ಲು ಕರಗುವಿಕೆಯಿಂದಾಗಿ ಸಮುದ್ರದ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ದಾಖಲಾಗುತ್ತದೆ. ಮಂಗಳೂರಿನ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆ 15.98 ಸೆಂ.ಮೀನಷ್ಟು ಇರುತ್ತದೆ. ಮುಂಬೈನಲ್ಲಿ ಈ ಪ್ರಮಾಣ 15.26 ಸೆಂ.ಮೀ ಮತ್ತು ನ್ಯೂಯಾರ್ಕ್‌'ನಲ್ಲಿ 10.65 ಸೆಂ.ಮೀನಷ್ಟು ಇರಲಿದೆ ಎಂದು ನಾಸಾದ ವರದಿ ಹೇಳಿದೆ.ಈ ಕುರಿತ ಲೇಖನ ಜರ್ನಲ್ ಸೈನ್ಸ್ ಅಡ್ವಾನ್ಸ್'ನಲ್ಲಿ ಪ್ರಕಟವಾಗಿದೆ.

ಇದುವರೆಗೆ ಮುಂಬೈ ಮತ್ತು ನ್ಯೂಯಾರ್ಕ್ ನಗರಗಳು ಹೆಚ್ಚು ಅಪಾಯದಲ್ಲಿದೆ ಎಂದು ಊಹಿಸಲಾಗಿತ್ತು. ಆದರೆ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆ ಕುರಿತು ಅಧ್ಯಯನ ನಡೆಸಲು ನಾಸಾ ಸಿದ್ಧಪಡಿಸಿರುವ ಹೊಸ ತಂತ್ರಜ್ಞಾನದಿಂದಾಗಿ, ಇಂಥ ಅಪಾಯಕಾರಿ ನಗರಗಳ ಸ್ಥಾನಗಳಲ್ಲಿ ಏರುಪೇರಾಗಿದ್ದು, ಮಂಗಳೂರು ಮುಂಚೂಣಿಗೆ ಬಂದಿದೆ. ಭಾರತದಲ್ಲಿ ಮಂಗಳೂರು, ಮುಂಬೈ, ಆಂಧ್ರದ ಕಾಕಿನಾಡ ಸೇರಿದಂತೆ ಜಗತ್ತಿನ 293 ಬಂದರು ನಗರಗಳಲ್ಲಿನ ಸಮುದ್ರ ಮಟ್ಟ ಏರಿಕೆಯನ್ನು ನಾಸಾದ ಹೊಸ ತಂತ್ರಜ್ಞಾನದ ಮೂಲಕ ವಿಶ್ಲೇಷಿಸಲಾಗಿದೆ.