ಇಸ್ಕಾನ್ ಪೂಜಾರಿ ಸಂಜಯ್ ಸತೀಶ್​​ನನ್ನು ಕೈ ಕಾಲು ಕಟ್ಟಿಹಾಕಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂನ ಬೆತ್ತಲ್ ನಗರದಲ್ಲಿ ನಡೆದಿದೆ.

ಬೆಂಗಳೂರು : ಇಸ್ಕಾನ್ ಪೂಜಾರಿ ಸಂಜಯ್ ಸತೀಶ್​​ನನ್ನು ಕೈ ಕಾಲು ಕಟ್ಟಿಹಾಕಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂನ ಬೆತ್ತಲ್ ನಗರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಸ್ಕಾನ್ ದೇವಾಲಯದಲ್ಲಿ ಅರ್ಚಕರಾಗಿದ್ದ ಸಂಜಯ್ ಸತೀಶ್ ಬೆತ್ತಲ್ ನಗರದ ಅಪಾರ್ಟ್​​ಮೆಂಟ್​ನಲ್ಲಿ ವಾಸವಾಗಿದ್ದರು. 15 ದಿನಗಳಿಗೊಮ್ಮೆ ಅಪಾರ್ಟ್​​​ಮೆಂಟ್​​​ಗೆ ಬಂದು ಒಂದೆರಡು ದಿನ ಉಳಿಯುತ್ತಿದ್ದ ಸಂಜಯ್ ಕಳೆದ ಬುಧವಾರದಂದು ಇಸ್ಕಾನ್​​ನಲ್ಲಿ ಪೂಜೆ ಮುಗಿಸಿಕೊಂಡು ಅಪಾರ್ಟ್​​​ಮೆಂಟ್​​ಗೆ ಬಂದಿದ್ದಾರೆ.

 ಈ ವೇಳೆಯಲ್ಲಿ ಅಪಾರ್ಟ್​​ಮೆಂಟ್​​ಗೆ ಬಂದಿರೋ ಕೆಲವು ದುಷ್ಕರ್ಮಿಗಳು ಆತನ ಕೈ ಕಾಲು ಕಟ್ಟಿ ಕೊಲೆ ಮಾಡಿದ್ದಾರೆ. ಆದರೆ ಕೊಲೆಯಾಗಿ ಒಂದು ವಾರ ಆದ್ರೂ ಅಕ್ಕಪಕ್ಕದ ಮನೆಯವರಿಗೆ ಈ ವಿಷ್ಯ ಗೊತ್ತಿರಲಿಲ್ಲ. ಕಳೆದ ರಾತ್ರಿ ಸಂಜಯ್ ಫ್ಲಾಟ್​​ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆ ಅಕ್ಕಪಕ್ಕದ ಮನೆಯವರು ಕೆ.ಆರ್ ಪುರಂ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬೆರಳಚ್ಚು ತಜ್ಞರನ್ನು ಕರೆಹಿಸಿ ಪರಿಶೀಲನೆ ನಡೆಸಿದ್ದು ತನಿಖೆಯನ್ನು ಕೈಗೊಂಡಿದ್ದಾರೆ. ಆದರೆ ಅಕ್ಕಪಕ್ಕದವರು ಸಂಜಯ್ ಸತೀಶ್ ಸುಮಾರು ವರ್ಷಗಳಿಂದ ಒಬ್ಬರೇ ಫ್ಲಾಟ್​​ನಲ್ಲಿ ವಾಸವಾಗಿದ್ದು ಅವರ ಹಿನ್ನಲೆ ಗೊತ್ತಿಲ್ಲ ಅಂದಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೋರಿಂಗ್ ಆಸ್ಪತ್ರೆಗೆ ಕಳುಹಿಸಿದ್ದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.