ಅಹ್ವಾಲ್ ಉಮ್ಮಾತ್ ಎಂಬಾತನಿಂದ ರಚನೆಯಾಗಿರುವ ‘ತಾಜ್ ಮಹಲ್’ ಚಿತ್ರದಲ್ಲಿ ದಾಳಿಗೆ ಸಿದ್ಧವಾಗಿ ನಿಂತಿರುವ ವ್ಯಕ್ತಿ ಸ್ಫೋಟಕ ತುಂಬಿದ ಹಿಂಬದಿ ಬ್ಯಾಗ್ ತೊಟ್ಟು ಬಂದೂಕು ಹಿಡಿದು ನಿಂತಿದ್ದಾನೆ.

ನವದೆಹಲಿ(ಮಾ.16): ವಿಶ್ವವಿಖ್ಯಾತ ತಾಜ್‌'ಮಹಲ್‌'ಗೆ ಉಗ್ರರ ದಾಳಿಯ ಭೀತಿ ಎದುರಾಗಿದೆ.

ತಾಜ್‌ಮಹಲ್ ಮೇಲೆ ಯಾವೆಲ್ಲ ರೀತಿಯಾಗಿ ದಾಳಿ ಮಾಡಬಹುದು ಎಂಬುದರ ಕುರಿತು ರಚನೆ ಮಾಡಲಾದ ಚಿತ್ರ ಐಸಿಸ್ ಪರವಾದ ವೆಬ್‌'ಸೈಟ್‌'ನಲ್ಲಿ ಪ್ರಕಟವಾಗಿದೆ. ಜೊತೆಗೆ ಈ ಚಿತ್ರವು ಮಾ.14ರಂದು ‘ಟೆಲಿಗ್ರಾಮ್’ ಅಪ್ಲಿಕೇಶನ್ ಮೂಲಕ ಎಲ್ಲೆಡೆ ರವಾನೆಯಾಗಿದೆ.

ಅಹ್ವಾಲ್ ಉಮ್ಮಾತ್ ಎಂಬಾತನಿಂದ ರಚನೆಯಾಗಿರುವ ‘ತಾಜ್ ಮಹಲ್’ ಚಿತ್ರದಲ್ಲಿ ದಾಳಿಗೆ ಸಿದ್ಧವಾಗಿ ನಿಂತಿರುವ ವ್ಯಕ್ತಿ ಸ್ಫೋಟಕ ತುಂಬಿದ ಹಿಂಬದಿ ಬ್ಯಾಗ್ ತೊಟ್ಟು ಬಂದೂಕು ಹಿಡಿದು ನಿಂತಿದ್ದಾನೆ.

ಮತ್ತೊಂದು ಚಿತ್ರದಲ್ಲಿ ಅರೇಬಿಕ್ ಭಾಷೆಯಲ್ಲಿ ‘ಆಗ್ರಾದಲ್ಲಿ ಹುತಾತ್ಮರಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂಬ ಅಕ್ಷರಗಳು, ಆತ್ಮಾಹುತಿ ದಾಳಿಯ ಸೂಚನೆ ನೀಡಿವೆ.

ಮಾ.8ರಂದು ಲಖನೌನ ಮನೆಯೊಂದರಲ್ಲಿ ಅಡಗಿದ್ದ ಶಂಕಿತ ಉಗ್ರ ಸೈಫುಲ್ಲಾ ಹತ್ಯೆಯ ಬಳಿಕ, ಮತ್ತೋರ್ವ ಐಎಸ್ ಪರ ಉಗ್ರ ಭಾರತದಲ್ಲಿ ದಾಳಿ ಬೆದರಿಕೆಯ ಸಂದೇಶವನ್ನು ಟೆಲಿಗ್ರಾಮ್‌'ನಲ್ಲಿ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ.