ಚೀನಾದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ‘ಉಯಿಗುರ್’ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆಯು ಐಸಿಸ್ ಜೊತೆಗೂಡಿದೆ ಎನ್ನಲಾಗಿದೆ.

ಬೀಜಿಂಗ್(ಮಾ.02): ಈಗಾಗಲೇ ಮಧ್ಯಪ್ರಾಚ್ಯ ದೇಶಗಳು, ಪಾಶ್ಚಾತ್ಯ ದೇಶಗಳಲ್ಲಿ ರಕ್ತದ ಹೊಳೆ ಹರಿಸಿರುವ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆ ಉಗ್ರರು ಈಗ ಚೀನಾಗೂ ಕಾಲಿರಿಸಿದ್ದಾರೆ.

ಚೀನಾದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ‘ಉಯಿಗುರ್’ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆಯು ಐಸಿಸ್ ಜೊತೆಗೂಡಿದೆ ಎನ್ನಲಾಗಿದ್ದು, ‘ನಾವು ರಕ್ತವನ್ನು ನದಿಯಂತೆ ಹರಿಸಲಿದ್ದೇವೆ’ ಎಂದು ಚೀನಾದಲ್ಲಿ ಅಂತರ್ಜಾಲದ ಮೂಲಕ ವಿಡಿಯೋ ಹರಿಬಿಟ್ಟಿದೆ. ಮೂಲಗಳ ಪ್ರಕಾರ ಐಸಿಸ್‌ಗೆ ಉಯಿಗುರ್ ಉಗ್ರರು ನಿಷ್ಠೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಚ್ಚರಗೊಂಡಿರುವ ಚೀನಾ ಸೇನೆಯು, ಈಗಾಗಲೇ ವಾಯವ್ಯ ಚೀನಾದಲ್ಲಿ ಸಭೆ ನಡೆಸಿ ಉಗ್ರವಾದದ ವಿರುದ್ಧ ಪಣ ತೊಡುವ ಶಪಥಗೈದಿದೆ. ಉಯಿಗುರ್ ಉಗ್ರರ ವಿರುದ್ಧ ಚೀನಾ ಬಹುಕಾಲದಿಂದ ಸೆಣಸುತ್ತಿದೆ.