ಬಾಗ್ದಾದ್‌[ಏ.30]: ಜಗತ್ತಿನ ಕುಖ್ಯಾತ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ಐಸಿಸ್‌ ಮುಖ್ಯಸ್ಥ ಅಬು ಬಕರ್‌ ಅಲ್‌ ಬಗ್ದಾದಿ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿಡಿಯೋವೊಂದರಲ್ಲಿ ಪ್ರತ್ಯಕ್ಷನಾಗಿದ್ದಾನೆ.

ಆದರೆ ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಗೊತ್ತಾಗಿಲ್ಲ.ಆದರೆ ಬಾಗ್ದಾದಿ ಈ ವಿಡಿಯೋದಲ್ಲಿ ಪೂರ್ವ ಸಿರಿಯಾದಲ್ಲಿ ಐಸಿಸ್ ಅಂತಿಮ ಕೋಟೆ ಬಾಗೂಜ್ ಗಾಗಿ ತಿಂಗಾಳಾನುಗಟ್ಟಲೆ ನಡೆದಿದ್ದ ಯುದ್ಧದ ಕುರಿತು ಉಲ್ಲೇಖಿಸಿದ್ದಾರೆ. ಈ ಹೋರಾಟ ಕಳೆದ ತಿಂಗಳಷ್ಟೇ ಮುಕ್ತಾಯಗೊಂಡಿದೆ ಎಂಬುವುದು ಗಮನಾರ್ಹ. 

ಒಂದು ಬೆಡ್ ಮೇಲೆ ಕುಳಿತ ಬಾಗ್ದಾದಿ ತನ್ನ ಎದುರು ಕುಳಿತಿದ್ದ ಮೂವರು ವ್ಯಕ್ತಿಗಳನ್ನುದ್ದೆಶಿಸಿ ಬೂಗೂಜ್ ಹೋರಾಟ ಮುಕ್ತಾಯಗೊಂಡಿದೆ ಎಂದಿದ್ದಾಋಎ. ಆದರೆ ಆ ಮೂವರು ವ್ಯಕ್ತಿಗಳ ಮುಖ ಬ್ಲರ್ ಮಾಡಲಾಗಿದೆ. ಹೀಗಾಗಿ ಗುರುತಿಸುವುದು ಅಸಾಧ್ಯವಾಗಿದೆ.