ಕುಂಭ ಮೇಳ ಮತ್ತು ತ್ರಿಶ್ಶೂರ್‌ನ ಪೂರಮ್ ಉತ್ಸವದ ವೇಳೆ ದಾಳಿ ನಡೆಸುವಂತೆ ತನ್ನ ಕಾರ್ಯಕರ್ತರಿಗೆ ಐಸಿಸ್ ಉಗ್ರ ನಾಯಕನೊಬ್ಬ ಕರೆ ನೀಡುತ್ತಿರುವ ಮಲಯಾಳಂ ಧ್ವನಿ ಮುದ್ರಿಕೆಯೊಂದು ಬಹಿರಂಗಗೊಂಡಿದೆ.

ನವದೆಹಲಿ: ಕುಂಭ ಮೇಳ ಮತ್ತು ತ್ರಿಶ್ಶೂರ್‌ನ ಪೂರಮ್ ಉತ್ಸವದ ವೇಳೆ ದಾಳಿ ನಡೆಸುವಂತೆ ತನ್ನ ಕಾರ್ಯಕರ್ತರಿಗೆ ಐಸಿಸ್ ಉಗ್ರ ನಾಯಕನೊಬ್ಬ ಕರೆ ನೀಡುತ್ತಿರುವ ಮಲಯಾಳಂ ಧ್ವನಿ ಮುದ್ರಿಕೆಯೊಂದು ಬಹಿರಂಗಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

10 ನಿಮಿಷದ ಈ ವಿಡಿಯೋದಲ್ಲಿರುವ ಧ್ವನಿ, ಕಾಸರಗೋಡಿನಿಂದ ನಾಪತ್ತೆಯಾಗಿ ಅಫ್ಘಾನಿಸ್ತಾನದಲ್ಲಿ ಐಸಿಸ್ ಸೇರಿದ್ದ ರಶೀದ್ ಅಬ್ದುಲ್ಲಾ ಎಂಬಾತನದ್ದು ಎನ್ನಲಾಗಿದೆ. ಕುಂಭ ಮೇಳ ಮತ್ತು ತ್ರಿಶ್ಶೂರ್‌ಪುರಂ ಉತ್ಸವದ ವೇಳೆ ಆಹಾರದಲ್ಲಿ ವಿಷಹಾಕಿ, ಟ್ರಕ್‌ಅನ್ನು ಜನರ ಮೇಲೆ ಹರಿಸಿ. ನಿಮ್ಮ ಬುದ್ಧಿಯನ್ನು ಉಪಯೋಗಿಸಿ ದಾಳಿ ನಡೆಸಿ ಎಂದು ಕರೆ ನೀಡಲಾಗಿದೆ.