Asianet Suvarna News Asianet Suvarna News

ಐಸಿಸ್ ಭಾರತಕ್ಕೆ ಸವಾಲಲ್ಲ: ಗೃಹಮಂತ್ರಿ ರಾಜನಾಥ್ ಸಿಂಗ್

ಹೈದರಾಬಾದ್’ನಲ್ಲಿ ನಡೆದ ಪೊಲೀಸ್ ಮಹಾನಿರ್ದೇಶಕರ 3-ದಿನಗಳ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್,  ಭದ್ರತೆ,  ಭಯೋತ್ಪಾದನೆ, ತೀವ್ರವಾದ, ಸೈಬರ್-ಅಪರಾಧ ಹಾಗೂ ರಸ್ತೆ ಸುರಕ್ಷತೆ ವಿಚಾರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ISIS Not a threat to India Says Home Minister Rajnath Singh

ಹೈದರಾಬಾದ್ (ನ.27): ಐಸಿಸ್ ಸಂಘಟನೆಯು ಭಾರತಕ್ಕೆ ಸವಾಲಾಗಿಲ್ಲವೆಂದು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಾರತೀಯ ಮುಸ್ಲಿಮರು ದೇಶವನ್ನು ಪ್ರೀತಿಸುತ್ತಾರೆ, ಆದುದರಿಂದ ಐಸಿಸ್’ಗಳಂಥ ಸಂಘಟನೆಗಳು ದೇಶಕ್ಕೆ ಸವಾಲಾಗುವ ಸಾಧ್ಯತೆಗಳಿಲ್ಲ ಎಂದು ಅವರು ಹೇಳಿದ್ದಾರೆ.

ಹೈದರಾಬಾದ್’ನಲ್ಲಿ ನಡೆದ ಪೊಲೀಸ್ ಮಹಾನಿರ್ದೇಶಕರ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್,  ಭದ್ರತೆ,  ಭಯೋತ್ಪಾದನೆ, ತೀವ್ರವಾದ, ಸೈಬರ್-ಅಪರಾಧ ಹಾಗೂ ರಸ್ತೆ ಸುರಕ್ಷತೆ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ವಿಚಾರದಲ್ಲಿ ಅಮಾಯಕರಿಗೆ ಯಾವುದೇ ರೀತಿಯ ತೊಂದರೆಯಾಗಕೂಡದು, ಹಾಗೂ ತಪ್ಪಿತಸ್ಥರು ಪಾರಾಗಬಾರದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ತನಿಖಾ ದಳ (ಎನ್’ಐಏ)ಯು ಈವರೆಗೆ ದೇಶದ ವಿವಿಧ ಕಡೆಗಳಿಂದ ಐಸಿಸ್ ಜತೆ ಸಂಬಂಧವಿರುವ ಆರೋಪದಲ್ಲಿ 68 ಮಂದಿಯನ್ನು ಬಂಧಿಸಿದೆ.     

Follow Us:
Download App:
  • android
  • ios