Asianet Suvarna News Asianet Suvarna News

ಬಿಗ್ ಬ್ರೇಕಿಂಗ್: ಯುವ ವಿಜ್ಞಾನಿಗಳನ್ನು ಸೆಳೆಯಲು ಐಎಸ್‌ಐ ಹನಿಟ್ರ್ಯಾಪ್!

ಇದು ಭಾರತೀಯರನ್ನು ಬೆಚ್ಚಿ ಬೀಳಿಸಿದ ವರದಿ! ಯುವ ಭಾರತೀಯ ವಿಜ್ಞಾನಿಗಳನ್ನು ಸೆಳೆಯಲು ಐಎಸ್‌ಐ ಹನಿಟ್ರ್ಯಾಪ್! ರಕ್ಷಣಾ ಇಲಾಖೆಯ ವಿಜ್ಞಾನಿಗಳಿಗೆ ಮಾಡೆಲ್‌ಗಳ ಮೂಲಕ ಗಾಳ! ರಹಸ್ಯ ಮಾಹಿತಿ ಪಡೆಯಲು ಸೆಕ್ಸ್ ಆಮೀಷವೊಡ್ಡುತ್ತಿದೆ ಐಎಸ್‌ಐ! ಬೆಚ್ಚಿ ಬೀಳಿಸುವ ಭಾರತೀಯ ಗುಪ್ತಚರ ಇಲಾಖೆ ವರದಿ

ISI using models to honey-trap young Indian scientists
Author
Bengaluru, First Published Oct 10, 2018, 8:49 PM IST

ನವದೆಹಲಿ(ಅ.10): ಬ್ರಹ್ಮೋಸ್‌ ಕ್ಷಿಪಣಿಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಹಾಗೂ ಇತರ ಕೆಲವು ದೇಶಗಳಿಗೆ ಸೋರಿಕೆ ಮಾಡುತ್ತಿದ್ದ ಎನ್ನಲಾದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಉದ್ಯೋಗಿಯೊಬ್ಬನನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಬಂಧಿಸಲಾಗಿದೆ.

ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌), ಸೇನಾ ಗುಪ್ತಚರ ವಿಭಾಗದ ಜತೆ ಜಂಟಿ ಕಾರ್ಯಾಚರಣೆ ನಡೆಸಿ, ನಿಶಾಂತ್‌ ಅಗರ್‌ವಾಲ್‌ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತ ನಾಗಪುರದಲ್ಲಿರುವ ಬ್ರಹ್ಮೋಸ್‌ ಕ್ಷಿಪಣಿ ಸಂಶೋಧನಾ ಕೇಂದ್ರದ (ಬಿಎಂಆರ್‌ಸಿ) ತಾಂತ್ರಿಕ ಸಂಶೋಧನಾ ವಿಭಾಗದಲ್ಲಿ ಸೀನಿಯರ್‌ ಸಿಸ್ಟಂ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ.

ISI using models to honey-trap young Indian scientists

ಈ ಮಧ್ಯೆ ಭಾರತದ ರಕ್ಷಣಾ ಇಲಾಖೆಯಲ್ಲಿರುವ ಯುವ ವಿಜ್ಞಾನಿಗಳನ್ನು ಸೆಳೆಯಲು ಪಾಕಿಸ್ತಾನದ ಐಎಸ್‌ಐ, ಮಾಡೆಲ್‌ಗಳು ಮತ್ತು ಸೆಕ್ಸ್ ವಿಡಿಯೋಗಳನ್ನು ಬಳಸಿ ಹನಿ ಟ್ರ್ಯಾಪ್ ಮಾಡುತ್ತಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಗೌಪ್ಯ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಭಾರತದ ಯುವ ವಿಜ್ಞಾನಿಗಳನ್ನು ಸೆಳೆಯುವಲ್ಲಿ ಐಎಸ್‌ಐ ನಿರತವಾಗಿದೆ ಎಂದು ತಿಳಿಸಿದೆ.

ಮಾಡೆಲ್‌ಗಳು, ಸೆಕ್ಸ್ ವಿಡಿಯೋಗಳ ಮೂಲಕ ಯುವ ವಿಜ್ಞಾನಿಗಳನ್ನು ಹನಿಟ್ರ್ಯಾಪ್ ಮಾಡುತ್ತಿರುವ ಐಎಸ್‌ಐ, ಈ ಮೂಲಕ ಭಾರತದ ರಹಸ್ಯ ಮಾಹಿತಿಗಳನ್ನು ಪಡೆಯುವ ಹುನ್ನಾರ ನಡೆಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆಯೂ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಪ್ರಮುಖವಾಗಿ ಸೇನೆ ಮತ್ತು ರಕ್ಷಣಾ ಇಲಾಖೆಯ ಯುವ ವಿಜ್ಞಾನಿಗಳೇ ಐಎಸ್‌ಐ ಟಾರ್ಗೆಟ್ ಎಂದು ವರದಿ ಎಚ್ಚರಿಸಿದೆ.

ISI using models to honey-trap young Indian scientists

ಬಂಧಿತ ನಿಶಾಂತ್‌ ಅಗರ್‌ವಾಲ್‌ ನಿಂದ ವಶಪಡಿಸಿಕೊಳ್ಳಲಾದ ಲ್ಯಾಪ್ ಟಾಪ್ ನಲ್ಲಿ ಹಲವು ಆಕ್ಷೇಪಾರ್ಹ  ಸಂಗತಿಗಳಿದ್ದು, ಪಾಕಿಸ್ತಾನದೊಂದಿಗೆ ನಡೆಸಿದ ಸಂಭಾಷಣೆಯ ವಿವರಗಳೂ ಇವೆ ಎನ್ನಲಾಗಿದೆ. ಅಲ್ಲದೇ ಬ್ರಹ್ಮೋಸ್‌ ಕ್ಷಿಪಣಿಯ ರಹಸ್ಯ ಮಾಹಿತಿಗಳೂ ಇದರಲ್ಲಿ ಇದ್ದು, ಈ ಎಲ್ಲಾ ಮಾಹಿತಿಗಳು ನಿಶಾಂತ್ ನ ವೈಯಕ್ತಿಕ ಲ್ಯಾಪ್ ಟಾಪ್ ಗೆ ಹೇಗೆ ಬಂದವು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios