ಹಿಂದೆ ಐಎಸ್ಐ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಅಕ್ತರ್ ಅವರನ್ನು ಬದಲಾಯಿಸಿ ನವೀದ್ ಮುಕ್ತಾರ್ ಅವರನ್ನು ನೇಮಿಸಿದ್ದಾರೆ.

ಇಸ್ಲಾಮಾಬಾದ್(ಡಿ.12): ಪಾಕಿಸ್ತಾನದ ಬೇಹುಗಾರಿಕೆ ಪಡೆ ಐಎಸ್ಐ'ನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ನವೀದ್ ಮುಕ್ತಾರ್ ನೇಮಕವಾಗಿದ್ದಾರೆ. ಇತ್ತೀಚಿಗಷ್ಟೆ ಪಾಕಿಸ್ತಾನ ಸೇನೆಯ ಮುಖ್ಯಸ್ಥರಾಗಿ ನೂತನವಾಗಿ ನೇಮಕವಾದ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಸೇನೆಯಲ್ಲಿ ಹಲವು ಬದಲಾವಣೆ ತಂದಿದ್ದಾರೆ.

ಹಿಂದೆ ಐಎಸ್ಐ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಅಕ್ತರ್ ಅವರನ್ನು ಬದಲಾಯಿಸಿ ನವೀದ್ ಮುಕ್ತಾರ್ ಅವರನ್ನು ನೇಮಿಸಿದ್ದಾರೆ. ಅಕ್ತರ್ ಅವರನ್ನು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ನೂತನವಾಗಿ ಆಯ್ಕೆಯಾಗಿರುವ ನವೀದ್ ಮುಕ್ತಾರ್ ಅವರು ಈ ಹಿಂದೆ ಇಸ್ಲಮಾಬಾದ್'ನ ಬೇಹುಗಾರಿಕಾ ಪಡೆಯ ಭಯೋತ್ಪಾದನಾ ವಿರೋಧಿ ಪಡೆಯ ಮುಖ್ಯಸ್ಥರಾಗಿದ್ದರು.