ವಾಷಿಂಗ್ಟನ್(ಸೆ.17): ಐಸಿಸ್‌ ಉಗ್ರರ ಲೈಂಗಿಕ ಸೇವಕಿಯಾಗಿದ್ದ ನಾದಿಯಾ ಮುರಾದ್ ಈಗ ವಿಶ್ವ ಸಂಸ್ಥೆಯ ಮಾನವ ಕಳ್ಳಸಾಗಣೆಯ ವಿರುದ್ಧದ ಜನಜಾಗೃತಿ ಅಭಿಯಾನದ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶಿತಗೊಂಡಿರುವ ನಾದಿಯಾಳನ್ನು ವಿಶ್ವ ಸಂಸ್ಥೆ ಇಂದು ಸದ್ಭವನಾ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

23 ವರ್ಷದ ನಾದಿಯಾ ಮುಸ್ಲಿಮೇತರ ಯಾಝಿದಿ ಸಮುದಾಯಕ್ಕೆ ಸೇರಿದವಳು. ಹಾಗಾಗಿ ನಾದಿಯಾ ಸೇರಿದಂತೆ ಆಕೆಯ ಸಮುದಾಯದ ಅಸಂಖ್ಯಾತ ತರುಣಿಯರನ್ನು ಐಸಿಸ್‌ ಉಗ್ರರು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಗುಲಾಮರನ್ನಾಗಿ ಮಾಡಿಕೊಂಡಿದ್ದರು.