ಎಐಸಿಸಿ ಮುಖಂಡರೊಂದಿಗೆ ಹೆಚ್ಚು ಆಪ್ತವಾಗಿರುವ ರಮ್ಯಾ ಅದರಲ್ಲೂ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿಯವರೊಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ.
ಬೆಂಗಳೂರು(ಆ.26): ಮಾಜಿ ಸಂಸದೆ ರಮ್ಯಾ ಅವರು ಕ್ಷೇತ್ರ ಬದಲಾವಣೆಗೆ ಚಿಂತನೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೆ.ಆರ್. ನಗರ ಅಥವಾ ಮೈಸೂರು ಕ್ಷೇತ್ರದ ಕಡೆ ವಲಸೆ ಹೋಗುವುದು ಕಾಂಗ್ರೆಸ್ ನಾಯಕಿಯ ಯೋಚನೆಯಾಗಿದೆ ಎನ್ನಲಾಗಿದೆ. ವಿಧಾನಸಭೆ'ಗೆ ಸ್ಪರ್ಧಿಸುವುದಾದರೆ ಕೆ.ಆರ್. ನಗರ ಕ್ಷೇತ್ರದಿಂದ ಅಥವಾ ಲೋಕಸಭೆಯಾದರೆ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.
ಎಐಸಿಸಿ ಮುಖಂಡರೊಂದಿಗೆ ಹೆಚ್ಚು ಆಪ್ತವಾಗಿರುವ ರಮ್ಯಾ ಅದರಲ್ಲೂ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿಯವರೊಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ಇತ್ತೀಚಿಗಷ್ಟೆ ರಾಹುಲ್ ಗಾಂಧಿ ರಮ್ಯಾ ಅವರನ್ನು ಕಾಂಗ್ರೆಸ್'ನ ಸಾಮಾಜಿಕ ಮಾಧ್ಯಮ ಉಸ್ತುವಾರಿಯನ್ನಾಗಿ ನೇಮಿಸಿದ್ದರು.
