ವಿವಿಧ ಸೇವೆಗಳಿಗೆ ಆಧಾರ್‌ ಸಂಯೋಜಿಸುವ ಪರ್ವ ಮುಂದುವರಿಸಿರುವ ಕೇಂದ್ರ ಸರ್ಕಾರ ಈಗ ಭೂದಾಖಲೆಗಳಿಗೆ ಆಧಾರ್‌ ಸಂಖ್ಯೆ ಸಂಯೋಜಿಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಬೇನಾಮಿ ಸಂಪತ್ತು ಹಾಗೂ ಭೂವಹಿವಾಟನ್ನು ಬಯಲಿಗೆಳೆಯಲು ಸರ್ಕಾರ ಬದ್ಧತೆ ವ್ಯಕ್ತಪಡಿಸುತ್ತಿರುವ ನಡುವೆಯೇ ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ಈ ನಡೆ ಬೇನಾಮಿ ಆಸ್ತಿಗಳನ್ನು ಬಯಲಿಗೆಳೆಯಲು ನೆರವಾಗಬಹುದಾಗಿದೆ. ಇದರ ಜತೆಗೆ ಭೂದಾಖಲೆಗಳಲ್ಲಿ ಪಾರದರ್ಶಕತೆ ಬರಬಹುದು' ಎಂಬ ‘ಸುದ್ದಿ' ಸೋಮವಾರ ಎಲ್ಲೆಡೆ ವೈರಲ್‌ ಆಗಿತ್ತು.
ವಿವಿಧ ಸೇವೆಗಳಿಗೆ ಆಧಾರ್ ಸಂಯೋಜಿಸುವ ಪರ್ವ ಮುಂದುವರಿಸಿರುವ ಕೇಂದ್ರ ಸರ್ಕಾರ ಈಗ ಭೂದಾಖಲೆಗಳಿಗೆ ಆಧಾರ್ ಸಂಖ್ಯೆ ಸಂಯೋಜಿಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಬೇನಾಮಿ ಸಂಪತ್ತು ಹಾಗೂ ಭೂವಹಿವಾಟನ್ನು ಬಯಲಿಗೆಳೆಯಲು ಸರ್ಕಾರ ಬದ್ಧತೆ ವ್ಯಕ್ತಪಡಿಸುತ್ತಿರುವ ನಡುವೆಯೇ ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ಈ ನಡೆ ಬೇನಾಮಿ ಆಸ್ತಿಗಳನ್ನು ಬಯಲಿಗೆಳೆಯಲು ನೆರವಾಗಬಹುದಾಗಿದೆ. ಇದರ ಜತೆಗೆ ಭೂದಾಖಲೆಗಳಲ್ಲಿ ಪಾರದರ್ಶಕತೆ ಬರಬಹುದು' ಎಂಬ ‘ಸುದ್ದಿ' ಸೋಮವಾರ ಎಲ್ಲೆಡೆ ವೈರಲ್ ಆಗಿತ್ತು.
ಆಧಾರ್ ಸಂಯೋಜಿಸುವ ಕಾರಣ ಭೂಮಾಲೀಕರನ್ನು ಗುರುತಿಸುವುದು ಸುಲಭವಾಗಲಿದೆ. ಒಂದು ವೇಳೆ ಸರ್ಕಾರವನ್ನು ವಂಚಿಸಲು ಯತ್ನಿಸಿದರೂ ಸೂಕ್ತ ತನಿಖೆಯ ಬಳಿಕ ನೈಜ ಮಾಲೀಕನ ಬಗ್ಗೆ ತಿಳಿದುಬರಲಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಜೂನ್ 15ರಂದು ಪತ್ರ ಬರೆದಿದ್ದು, ‘ಭೂದಾಖಲೆಗಳನ್ನು ರಾಜ್ಯ ಸರ್ಕಾರ 2017ರ ಆಗಸ್ಟ್ 14ರೊಳಗೆ ಡಿಜಿಟಲೀಕರಣಗೊಳಿಸಬೇಕು. 1950ರಿಂದ ಈಚೆಯ ಯಾವುದೇ ಸ್ಥಿರಾಸ್ತಿ ಇದ್ದರೂ (ಕೃಷಿ ಅಥವಾ ಕೃಷಿಯೇತರ ಜಮೀನು ಇರಬಹುದು ಅಥವಾ ಸ್ವತಂತ್ರ ಮನೆ/ಫ್ಲ್ಯಾಟ್) ಇರಬಹುದು, ಅಥವಾ ಜಮೀನು ಇದ್ದರೂ ಇರಬಹುದು' ಎಂದು ತಿಳಿಸಿದೆ ಎಂದು ಇಂಟರ್ನೆಟ್ನಲ್ಲಿ ಓಡಾಡಿದ ವರದಿಗಳು ಹೇಳಿದ್ದವು.
‘ಸಂಸತ್ತಿನಲ್ಲಿ ಕಾಯ್ದೆಯೊಂದನ್ನು ರೂಪಿಸಿ ಭೂದಾಖಲೆಗಳನ್ನು ಆಧಾರ್ನೊಂದಿಗೆ ಸಂಯೋಜಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ' ಎಂದೂ ಹೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಸ್ಪಷ್ಟನೆ ನೀಡಿ, ಇಂಥ ಯಾವುದೇ ಪತ್ರವನ್ನು ಕೇಂದ್ರ ಸರ್ಕಾರ ಬರೆದಿಲ್ಲ. ಇದೊಂದು ಸುಳ್ಳು ಸುದ್ದಿ. ಇಂತಹ ಯಾವುದೇ ನಿರ್ಣಯ ಆಗಿಲ್ಲ. ಹೀಗಾಗಿ ಈ ಪತ್ರದ ಸೃಷ್ಟಿಕರ್ತನ ಬಂಧನಕ್ಕೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದೆ.
